ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
- 15 Jan 2024 , 6:01 AM
- Haveri
- 119
ಹಾವೇರಿ : ಯುವಕರ ವಿಶ್ವಾಸದ ಶಕ್ತಿ ಒಗ್ಗೂಡಿಸಿ ಪಕ್ಷ ಬಲವರ್ಧನೆ ಮಾಡಿ, ಬಡವರು ಹಾಗೂ ಸಾರ್ವಜನಿಕ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಕಾಲಿರಿಸಿದ್ದೇನೆ. ತಾಲೂಕಿನ ಭವಿಷ್ಯದ ರಾಜಕಾರಣದಲ್ಲಿ ಹೊಸ ಮನ್ವಂಥರ ಆರಂಭವಾಗುವುದು ಎಂದು ಭರತ ಸಂಸ್ಥೆಯ ಅಧ್ಯಕ್ಷ, ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂರಾರು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡು ಅವರು ಮಾತನಾಡಿದರು. ತಾಲೂಕಿನ ರಾಜಕಾರಣದಲ್ಲಿ ಈ ಹಿಂದೇ ಕೆಲವರ ಶಡ್ಯಂತ್ರದಿಂದ ನಾನು ಹಾಗೂ ಮಾಜಿ ಶಾಸಕ ಅಜಂಪೀರ ಖಾದ್ರಿ ಇಬ್ಬರು ಎಂತಹ ಕಷ್ಟ ಅನುಭವಿಸಿದೆವು ಎನ್ನುವುದು ಗೊತ್ತಿದ್ದವಿಚಾರ, ನಮ್ಮ ಹಿರಿಯರು ರಾಜಕೀಯ ಹಿನ್ನಲೆಯಲ್ಲಿ ಅವರ ಅನುಭವವನ್ನು ಬಳಸಿಕೊಂಡು ನಾಡಿನ ಸೇವೆ ಮಾಡುತ್ತೇನೆ. ಅಲ್ಲದೇ ಭವಿಷ್ಯದ ದಿನಗಳಲ್ಲಿ ಹಿರಿಯರು ಪಕ್ಷದ ಕಾರ್ಯಕರ್ತರ ಪಡೆ ನಿರ್ಮಿಸಿ ತಾಲೂಕಿನಲ್ಲಿ ಕಾಂಗ್ರೇಸ್‍ಗೆ ಹೊಸ ಶಕ್ತಿ ನೀಡುವ ಉದ್ದೇಶವಿದೆ ಎಂದರು. ತಾಲೂಕು ಕಾಂಗ್ರೇಸ್ ಅಧ್ಯಕ್ಷ ಎಂ.ಎನ್. ವ್ಯಂಕೋಜಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷ ನಾವಿಕನಿಲ್ಲದ ಹಡಗಿನಂತ್ತೆ ಪರಿಸ್ಥಿತಿ ತಲೆದೋರಿತ್ತು. ಶ್ರೀಕಾಂತ ದುಂಡಿಗೌಡ್ರ ಆಗಮನದಿಂದ ಹೆಚ್ಚುಹೆಚ್ಚು ಯುವಕರು ಹೆಚ್ಚು ಸ್ಫೂರ್ತಿಯಿಂದ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಭಲವರ್ಧನೆ ಮಾಡಿ ಉತ್ತಮವಾಗಿ ಸಂಘಟನೆ ಮಾಡೋಣ ಎಂದರು. ನಾಗರಾಜ ಹೊಸಮನಿ, ಗುರು ಅಣ್ಣಿಗೇರಿ, ಈಶ್ವರಗೌಡ ಪಾಟೀಲ, ನವೀನ ಸಾಸನೂರು. ಅಲ್ಲದೇ ಪುರಸಭೆಯ ಪಕ್ಷೇತರ ಸದಸ್ಯರು ಅಲ್ಲದೇ ಹತ್ತಾರು ಯುವಕರು ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಸೇರ್ಪಡೆಯಾದರು. ಹನುಮರೆಡ್ಡಿ ನಡುವಿನಮನಿ, ಎಸ್,ಎಫ್,ಮಣಕಟ್ಟಿ. ಎಫ್,ಸಿ,ಪಾಟೀಲ. ಕಿರಣಗೌಡ ಪಾಟೀಲ. ಮಲ್ಲಿಕಾರ್ಜುನ ಪಾಟೀಲ, ಮಂಜುನಾಥ ತಿಮ್ಮಾಪೂರು, ಶಬ್ಬೀರ ಮಕಾನ್ದಾರ, ವೀರೇಶ ಅಜೂರು, ಗುರುವಿನಗೌಡ ಪಾಟೀಲ ಅಲ್ಲದೇ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.












