ಶಾಸಕ ಸತೀಶ ಜಾರಕಿಹೊಳಿಯವರಿಂದ ಅಶೋಕ ಚೌಗಲಾ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ

ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದ ಸಮಾಜ ಸೇವಕರು ಹಾಗೂ ಕಲಾ ಪ್ರೇಮಿಗಳಾದ ಅಶೋಕ ಘೋಳಪ್ಪಾ ಚೌಗಲಾ ಇವರು ಮಾಡಿರುವ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಂಸ್ಕೃತಿಕ ವೇಧಿಕೆ ಕರ್ನಾಟಕ ಗಾನಕೋಗಿಲೆ ಬಸವರಾಜ ಅಭಿಮಾನಿ ಬಳಗ ವತಿಯಿಂದ ಇವರಿಗೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ ನೀಡಿದ್ದು, ಕರಗುಪ್ಪಿ ಗ್ರಾಮದ ಶ್ರೀ ಸೀಮಿ ದೇವಸ್ಥಾನದ ಬಳಿ ಇರುವ ಕಾರ್ಯಕ್ರಮದಲ್ಲಿ ಶಾಸಕ, ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯವರು ಪ್ರಶಸ್ತಿ ಪ್ರದಾನ ಮಾಡಿದರು. ಕುಂದರನಾಡಿನ ಭಾಗದಲ್ಲಿ ಸಮಾಜ ಸೇವಕ ಅಶೋಕ ಚೌಗಲಾ ಅವರು ಸಲ್ಲಿಸಿರುವ ಸೇವೆಯನ್ನು ಶಾಸಕ ಸತೀಶ ಜಾರಕಿಹೊಳಿ ಪ್ರಶಂಶಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಂಜುನಾಥ ಪಾಟೀಲ ಹಾಗೂ ಇನ್ನಿತರ ಗಣ್ಯರು ಕಲಾಭಿಮಾನಿಗಳು ಗ್ರಾಮಸ್ತರು ಉಪಸ್ಥಿತರಿದ್ದರು.

promotions

promotions

Read More Articles