ರೈತರಿಗೆ ವಿಶೇಷ ಕಾಳಜಿವಹಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ : ಈರಣ್ಣಾ ಕಡಾಡಿ

ಮೂಡಲಗಿ: ರೈತರ ಶ್ರೇಯೋಭಿವೃದ್ಧಿಗಾಗಿಯೇ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರ ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅವುಗಳ ಸದವಿನಿಯೋಗಕ್ಕಾಗಿ ಪಕ್ಷದ ಪದಾಧಿಕಾರಿಗಳು ವಿಶೇಷ ಕಾಳಜಿವಹಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಕಲ್ಲೋಳಿ ಪಟ್ಟಣದ ಸಂಸದರ(ರಾಜ್ಯಸಭಾ) ಜನಸಂಪರ್ಕ ಕಾರ್ಯಾಲಯದಲ್ಲಿ ಇಂದು ಅರಭಾಂವಿ ಮಂಡಲದ ರೈತ ಮೋರ್ಚಾ ನೂತನ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಜಗತ್ತಿನಲ್ಲಿ ಅತಿ ದೊಡ್ಡ ಪಕ್ಷವಾದ ಬಿಜೆಪಿ ಕೇಂದ್ರ ಮತ್ತು ರಾಜ್ಯ ಎರಡು ಕಡೆ ನಮ್ಮ ಪಕ್ಷ ಆಡಳಿತದಲ್ಲಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾಗಿರುವ ಪ್ರತಿಯೊಬ್ಬ ಪದಾಧಿಕಾರಿಗಳಿಗೆ ವಿಶೇಷ ಜವಾಬ್ದಾರಿಗಳಿದ್ದು ಈ ಜವಾಬ್ದಾರಿಗಳು ವಿಶೇಷ ಕಾಳಜಿಯಿಂದ ಮಾಡುವ ಮೂಲಕ ಜನಾನುರಾಗಿಯಾಗಿ ಹೊರ ಹೊಮ್ಮ ಬೇಕಾಗಿದೆ ಎಂದು ಶುಭ ಹಾರೈಸಿದರು. ಅರಭಾವಿ ಮಂಡಲ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ತಂಡ-ತಂಡವಾಗಿ ಬಂದು ಈರಣ್ಣ ಕಡಾಡಿ ಅವರನ್ನು ಅಭಿನಂದಿಸಿ, ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಕೌಜಲಗಿ, ಅಡಿವೆಪ್ಪ ಕುರಬೇಟ, ಬಸವರಾಜ ನಿಡಗಂದಿ, ಸುರೇಶ ಮಠಪತಿ, ಪುಂಡಲೀಕ ಅರಭಾವಿ, ಭೀಮಶಿ ಬಂಗಾರಿ, ಹಣಮಂತ ಸತರಡ್ಡಿ, ಚೇತನ ರಡರಟ್ಟಿ, ಮಹಾದೇವ ಮಸರಗುಪ್ಪಿ ಸೇರಿದಂತೆ ಅನೇಕ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

promotions

promotions

Read More Articles