ಬೆಳಗಾವಿ: ಇಂದು ಸುರಿದ ಗುಡುಗು ಸಹಿತ ಭಾರಿ ಮಳೆಗೆ 10 ಮೇಕೆಗಳು ಸಾವಿಗೀಡಾದ ಘಟನೆ ಗೋಕಾಕ್ ತಾಲೂಕಿನ ಮರಡಿ ಶಿವಪುರ ಗ್ರಾಮದಲ್ಲಿ ನಡೆದಿದೆ. ಕುರಿಗಾಹಿ ಬೀರಪ್ಪ ಕೊತ್ತಲ ಅವರಿಗೆ ಸೇರಿದ ಮೇಕೆಗಳಾಗಿವೆ ಎಂದು ತಿಳಿದುಬಂದಿದ್ದು. ಇವರಿಗೆ ಜಲ ಸಂಪನ್ಮೂಲ ಸಚಿವ ಸಚಿವ ರಮೇಶ್ ಜಾರಕಿಹೊಳಿ ದೂರವಾಣಿ ಕರೆಮಾಡಿ ಮಾತನಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಬೀರಪ್ಪನಿಗೆ ಆಧಾರವಾಗಿದ್ದ ಕುರಿಗಳೂ ಸತ್ತುಹೋದ ಹಿನ್ನೆಲೆ ಸೂಕ್ತ ಪರಿಹಾರ ಒದಗಿಸಲು ರಮೇಶ ಜಾರಕಿಹೊಳಿ ತಹಶಿಲ್ದಾರ್ ಗೆ ಸೂಚಿಸಿದ್ದಾರೆ.