ರಂಬಾಪುರಿ ಜಗದ್ಗುರುಗಳು ಕೊರೋನಾ‌ದಿಂದ ಬೇಗನೆ ಗುಣಮುಖರಾಗಲಿ ಎಂದು ಭಕ್ತರಿಂದ ವಿಶೇಷ ಪೂಜೆ

  • 15 Jan 2024 , 12:03 AM
  • Haveri
  • 135

ಬ್ಯಾಡಗಿ: ಕರೋನಾ ವೈರಸನಿಂದ ಚಿಕಿತ್ಸೆ ಪಡೆಯುತ್ತಿರುವ ಬಾಳೆಹೊನ್ನೂರು ರಂಬಾಪುರಿ ಪೀಠದ 1008 ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಬೇಗನೆ ಗುಣಮುಖರಾಗಲಿ ಎಂದು ಇಲ್ಲಿನ ರೇಣುಕ ಮಂದಿರದಲ್ಲಿ ಗುರುವಾರ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖಂಡ ಗಿರೀಶ ಇಂಡಿಮಠ, ದೇಶಾದ್ಯಂತ ಕೋವಿಡ್ ವೈರಸ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಎಲ್ಲೆಡೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ರಂಭಾಪುರಿ ಶ್ರೀಗಳಿಗೂ ಕರೋನ ಪಾಸಿಟಿವ್ ದೃಡಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗನೆ ಗುಣಮುಖರಾಗಿ ಹೊರಬಂದು ಭಕ್ತರಿಗೆ ದರ್ಶನಾಶೀರ್ವಾದ ನೀಡಲಿ ಎಂದು ಎಲ್ಲರೂ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಕೊಟ್ರೇಶ ಮೂಡ್ವಿ, ಕುಮಾರ ಹಿರೇಮಠ, ರುದ್ರಯ್ಯ ಹಿರೇಮಠ, ಮಂಜಯ್ಯ ಹಿರೇಮಠ ಇತರರಿದ್ದರು

promotions

promotions

Read More Articles