ರೈತರಿಗೆ ಪರಿಹಾರಧನ ನೀಡುವಲ್ಲಿ ವಿಳಂಭ ಕಚೇರಿ ಸಾಮಗ್ರಿಗಳು ಜಪ್ತಿ

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮತ್ತು ಕ.ನೀ.ನಿ. ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಸಾಮಗ್ರಿಗಳನ್ನು ದಿ. 4 ರಂದು ಜಪ್ತ ಮಾಡಲಾಯಿತು.ರೈತರಿಗೆ ಪರಿಹಾರಧನ ನೀಡುವಲ್ಲಿ ವಿಳಂಭ ಮಾಡಿದ್ದ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ಜಮೀನುಗಳಲ್ಲಿ ಬಳ್ಳಾರಿ ನಾಲಾ ಕಾಲುವೆ ನಿರ್ಮಾಣವಾಗಿದ್ದು, ಸಂಬಂಧಪಟ್ಟ ರೈತರು ಬೆಳಗಾವಿ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಬಿ.ಸಿ. ಬೆಲ್ಲದ ವಕೀಲರ ಮುಖಾಂತರ ಕೇಸ ನಡೆಸಿ ಹೆಚ್ಚಿನ ಪರಿಹಾರಧನ ಮಂಜೂರಾಗಿರುತ್ತದೆ. ಮಂಜೂರಾಗಿ 2 ವರ್ಷಗಳು ಹತ್ತಿರ ಬಂದರೂ ಇಲ್ಲಿಯವರೆಗೆ ಹಿಡಕಲ್ ಡ್ಯಾಮ ವಿಶೇಷ ಭೂಸ್ವಾಧೀನಾಧಿ ಕಚೇರಿಯವರು ಮತ್ತು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯದಿಂದ ಪರಿಹಾರಧನ ರೈತರಿಗೆ ನೀಡಿಲ್ಲ.

promotions

ಇಲ್ಲಿಯವರೆಗೆ ಪರಿಹಾರಧನ ತುಂಬದ ಕಾರಣ ಸಂಬಂದಪಟ್ಟ ನ್ಯಾಯಾಲಯದಿಂದ ಆಫೀಸ ಜಪ್ತಿ ವಾರೆಂಟ ಪಡೆದುಕೊಂಡಿದ್ದು, ಆ ಪ್ರಕಾರ ಶುಕ್ರವಾರ ದಿ. 04-09-2020 ರಂದು ನ್ಯಾಯಾಲಯದ ಆದೇಶದ ಮೇರೆಗೆ ವಿಶೇಷ ಭೂಸ್ವಾಧಿನ ಕಚೇರಿ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯಕ್ಕೆ ಹೋಗಿ ನ್ಯಾಯಾಲಯದ ಬೇಲಿಪ್ ಮುಖಾಂತರ ಜಮೀನು ಮಾಲಕರಾದ ಗೀತಾ ದೇಸಾಯಿ ಮತ್ತು ಇತತರು ನ್ಯಾಯವಾದಿ ಬಿ.ಸಿ. ಬೆಲ್ಲದ ಮುಖಾಂತರ ಟೇಬಲ, ಕುರ್ಚಿ ಝರಾಕ್ಸ ಮಶೀನ, ಕಂಪ್ಯೂಟರ ಮಾನಿಟರ ಜಪ್ತ ಮಾಡಿ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಜಮಾ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಹುಕ್ಕೇರಿ ಬೇಲಿಪ್‍ಗಳಾದ ಬಿ.ಎಸ್. ಪಾಶ್ಚಾಪೂರ, ಬಿ.ಎಸ್. ಸದಲಗಿ ಮತ್ತು ನ್ಯಾಯವಾದಿ ಎಂ. ಆಯ್. ನಿಜಗುಣ ಉಪಸ್ಥಿತರಿದ್ದರು.

promotions

Read More Articles