ಕೋರೊನಾ ಅಬ್ಬರಕ್ಕೆ ನಲುಗುತ್ತಿದೆ ಕುಂದಾನಗರಿ
- 15 Jan 2024 , 12:20 AM
- Belagavi
- 150
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕೊರೊನಾ ರೌದ್ರಾವತಾರ ಮುಂದುವರೆದಿದೆ. ದಿನಕ್ಕೊಂದರಂತೆ ಹೊಸ ಕೋರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬರುತಿವೆ. ಇವು ಗಡಿನಾಡ ಜಿಲ್ಲೆಯ ಜನರಲ್ಲಿ ಆತಂಕವನ್ನು ಹೆಚ್ಚಿಸಿವೆ. ಕೋರೊನಾ ಜಿಲ್ಲೆಯಿಂದ ದೂರುವಾಯಿತು ಎನ್ನುವಷ್ಟರಲ್ಲಿ ಕೋರೊನಾ ರಣಕೇಕೆ ಹಾಕುತ್ತಿದೆ ಸೋಂಕಿತರ ಸಂಖ್ಯೆ ಕುಂದಾನಗರಿಯಲ್ಲಿ ಏರುತ್ತಲೇ ಸಾಗಿದೆ ಹಾಗಾದ್ರೆ ಹೇಗೆ ? ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ಎಷ್ಟು ? ಎನ್ನುವ ಇನಸೈಡ್ ಸ್ಟೋರಿ ಇಲ್ಲಿದೆ ನೋಡಿ...
ಹೌದು.... ತಬಲಿಕ್, ಅಜಮೀರ್ ಹಿಡಿದು ಝಾರ್ಖಂಡ ನಂಟೂ ಸಹ ತಾಗಿ ಸದ್ಯ ಮುಂಬೈ ಪ್ರಕರಣಗಳು ಸೇರಿ ಇಲ್ಲಿಯವರೆಗೆ ಒಟ್ಟು 160 ಕೋರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರಿಂದ ಕುಂದಾನಗರಿ ಜಿಲ್ಲೆಯ ಜನರಲ್ಲಿ ಆತಂಕ ದುಪ್ಪಟ್ಟಾಗಿದ್ದು ಕೊರೊನಾ ಸೋಂಕು ದೆಹಲಿಯ ಜಮಾತ್ ಕಾರ್ಯಕ್ರಮದಿಂದ ಹರಡಿ ತಬ್ಲಿಘಿಗಳಿಂದ ಮೊದಲು ಶುರುವಾಗಿ ಕೊರೊನಾ ಅಪಾಯದ ಮಟ್ಟ ತಲುಪಿದೆ. ಕೋರೊನಾ ಬೆಳಗಾವಿಗರ ಮಾನಸಿಕ ನೆಮ್ಮದಿಯನ್ನು ಕೆಡಿಸಿದೆ. ಜಿಲ್ಲೆಯಲ್ಲಿ ಒಟ್ಟು 160 ಕೋರೊನಾ ಪಾಸಿಟಿವ್ ಪ್ರಕರಣ ದಾಖಲಾಗಿ ಕಿಲ್ಲರ್ ಕೋರೊನಾ ರಣಕೇಕೆ ಹಾಕುತಿದೆ. ರಾಜ್ಯದ ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದ ಬೆಳಗಾವಿ ಸದ್ಯ ಎಂಟನೇ ಸ್ಥಾನದಲ್ಲಿದದ್ದಂದು ಒಂದೇ ಸಮಾಧಾನದ ಸಂಗತಿ ಎಂದು ಹೇಳಬಹುದು. ಸದ್ಯ ಜಿಲ್ಲೆಯಲ್ಲಿ 54 ಕೋರೊನಾ ಆಕ್ಟಿವ್ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಈ ವರೆಗೂ 12855 ಜನರ ಮೇಲೆ ನಿಗಾ ಇಡಲಾಗಿದ್ದು ಈ ವರೆಗೆ 4534 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರೆಂಟನ್ ಮಾಡಲಾಗಿದೆ. ಒಟ್ಟು 1927 ಜನರ 14 ದಿನಗಳ ಹೋಮ್ ಕ್ವಾರೆಂಟನ್ ಮತ್ತು 6353 ಜನರ 28 ದಿನಗಳ ಹೋಮ್ ಕ್ವಾರೆಂಟನ್ ಕಂಪ್ಲೀಟ್ ಆಗಿದೆ. ಇದು ವರೆಗೆ 106 ಜನ ಕೋರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಹಾಗೂ ಜಿಲ್ಲೆಯಲ್ಲಿ ಕೋರೊನಾ ಸೋಂಕಿತ ಓರ್ವ ವೃದ್ಧೆ ಸಾವನಪ್ಪಿದ್ದಾಳೆ. ಗಡಿನಾಡು ಬೆಳಗಾವಿ ಜೆಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಬಹುದು. ಕೋರೊನಾದ ಕರಿಛಾಯೆ ಯಾವ ಟೈಮಲ್ಲಿ ಈ ಗಡಿನಾಡಿನ ಮೇಲೆ ಬೀರಿತೋ ಗೊತ್ತಿಲ್ಲ ಅಂದಿನಿಂದ ಇಂದಿನವರೆಗೂ ಬಿಟ್ಟು ಬಿಡದೆ ಕೋರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ವರೆಗೆ ಜಿಲ್ಲೆಯಲ್ಲಿ 11559 ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರವಾನೆ ಆಗಿದ್ದು ಬೆಳಗಾವಿ ಮಹಾರಾಷ್ಟ್ರಕ್ಕೆ ಸಮೀಪವಿರುವ ಕಾರಣ ಮುಂಬೈ ನಂಜಿನ ಆತಂಕದಲ್ಲಿ ಕುಂದಾನಗರಿ ನಲುಗುತ್ತಿದೆ. ನಗರಗಳಿಂದ ಹಳ್ಳಿಗಳಿಗೂ ಡೆಡ್ಲಿ ಕೊರೊನಾ ಎಂಟ್ರಿ ಕೊಡುತ್ತಿದ್ದು ಜನರನ್ನು ನಿದ್ದೆಗೆಡಿಸಿದೆ. ನಗರ ಪ್ರದೇಶದಲ್ಲಿ ಹೆಚ್ಚಾಗಿ ಇರದ ಸೋಂಕು ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದು ಗ್ರಾಮೀಣ ಜನರಲ್ಲಿ ಅಂತಂಕವನ್ನುಂಟು ಮಾಡಿದೆ. ಈ ಡೆಡ್ಲಿ ಕೋರೊನಾ ಶಾಂತವಾಗಿದ್ದ ಚಿಕ್ಕೋಡಿಯ ಹೆಬ್ಬಾಲಿಗೂ ಕಾಲಿಟ್ಟಿದ್ದು ಚಿಕ್ಕೋಡಿ ವಲಯದಲ್ಲಿ 5 ಪಾಸಿಟಿವ ಪ್ರಕರಣಗಳು ದೃಢ ಪಟ್ಟಿವೆ. ತಾಯಿ ಹಾಗೂ ಒಂದು ವರ್ಷದ ಮಗುವಿಗೆ ಕೋರೊನಾ ಸೋಂಕು ದೃಢಪಟ್ಟಿದ್ದ ಕಾರಣ ಚಿಕ್ಕೋಡಿ ವಲಯದಲ್ಲಿ ಬಾರಿ ಬಿರುಗಾಳಿ ಎಬ್ಬಿಸಿದೆ. ಕ್ವಾರೆಂಟೆನಲ್ಲಿದ್ದವರಿಗೆ ಕೋರೊನಾ ಸೋಂಕು ತಗುಲಿದೆ ಎಂಬುದು ಗಮನಾರ್ಹ ಅಂಶ. ಒಟ್ಟಾರೆಯಾಗಿ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಯ ಕೆಲವು ಪ್ರದೇಶಗಳು ಹಾಟ್‍ಸ್ಪಾಟ್ ಆಗಿ ಬದಲಾಗಿದ್ದು ಸೋಂಕು ಕಂಡು ಬಂದ ಪ್ರದೇಶಗಳನ್ನು ಸಿಲಡೌನ್ ಮಾಡಲಾಗಿದೆ ಕೇವಲ ನಗರ ಪ್ರದೇಶ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಕ್ಕೂ ಕೋರೊನಾ ಸೋಂಕು ಪತ್ತೆಯಾಗಿದ್ದು ಕಳವಳಕಾರಿ ಸಂಗತಿ, ಇನ್ನು ಈ ಕೋರೊನಾ ತಡೆಯಲು ಅಧಿಕಾರಿಗಳು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಗಡಿಭಾಗದ ಚೆಕಪೋಸ್ಟಗಳಲ್ಲಿ ಹದ್ದಿನ ಕಣ್ಣು ಇಟ್ಟು ಕೆಲಸ ಮಾಡುತ್ತಿದ್ದಾರೆ ಆದಷ್ಟು ಬೇಗ ಕೋರೊನಾ ತೋಲಗಲಿ ಎನ್ನುವುದು ನಮ್ಮ ಆಶಯ..











