ಶಿಕ್ಷಕರು ಚಿಂತನಾತ್ಮಕ ಸಮಾಜದ ಶಿಲ್ಪಿಗಳು: ಮಠಪತಿ

ಯಮಕನಮರಡಿ: ಶಿಕ್ಷಕರು ಚಿಂತನಾತ್ಮಕ ಸಮಾಜ ನಿರ್ಮಿಸುವ ಶಕ್ತಿಯನ್ನು ಹೊಂದಿದ್ದಾರೆ ಶಿಕ್ಷಣದಲ್ಲಿಂದು ವ್ಯತ್ಯಾಸ ಮತ್ತು ಪ್ರವೃತ್ತಿಗಳು ಬದಲಾಗಬೇಕಿದೆ ಎಂದು ಬಿ.ಎ.ಮಠಪತಿ ಹೇಳಿದರು. ಅವರು ಸಮೀಪದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಶ್ರೀ ಡಿ.ಬಿ.ಹೆಬ್ಬಾಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಶಿಕ್ಷಕರ ದಿನಾಚರಣೆಯನ್ನು ಮಹತ್ವವನ್ನು ವಿವರಿಸಿ ಮಾತನಾಡಿದ ಅವರು ಸಮಾಜದಲ್ಲಿಂದು ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಅಗತ್ಯವಾಗಿದೆ ಬಹುಶ: ಈ ನೀತಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಸಮಾಜವನ್ನು ಸತ್ವಯುತವಾದ ಪರಿಶುಧ್ದವಾದ ಮಾರ್ಗದಲ್ಲಿ ಇಂದು ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಎ,ಬಿ ಜಿಡ್ಡಿಮನಿ, ಹಾಗೂ ಹಿರಿಯ ಉಪನ್ಯಾಸಕರಾದ ಬರಗಾಲಿ ಮಾತನಾಡಿ ಒಂದೆ ಸೂರಿನಡಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉತ್ತಮ ನುರಿತ ಶಿಕ್ಷಕರಿದ್ದು ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಎಲ್ಲರೂ ಶ್ರಮಿಸೋಣ ಗ್ರಾಮಸ್ತರ-ವಿದ್ಯಾರ್ಥಿಗಳ ಅಗತ್ಯತೆಗಳನ್ನು ಅರಿತು ಬೋಧಿಸುವ ಪ್ರಾವಿತ್ರ್ಯತೆಯ ವೃತ್ತಿಯಲ್ಲಿರುವ ನಾವೇಲ್ಲರೂ ಧನ್ಯರು ಎಂದು ಹೇಳಿದರು. ಗ್ರಾಮ ಪಂಚಾಯತ ಅಧ್ಯಕ್ಷ ಸುಧೀರ ಗಿರಿಗೌಡರ, ಸಿ,ಬಿ,ಸಿ, ಉಪಾಧ್ಯಕ್ಷ ಬಾಬು ಕಡಲಗಿ, ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಬಾಳಗೌಡಾ ಪಾಟೀಲ, ಅಶೋಕ ಹಟ್ಟಿ, ದೀಲಾವರ ಹಜರತಭಾಯಿ, ಮಹಾವೀರ ಸನಕಿ, ಪ್ರೋ.ಬರಗಾಲಿ, ಪ್ರೋ.ಎಮ್,ಎಮ್,ಮಗದುಮ್ಮ, ಪ್ರೋ.ರಿಬೇಕಾ ಸಾಳ್ವಿ, ಮುಖ್ಯೋಪಾಧ್ಯಾಯರಾದ ಬಿ,ಎಸ್, ಪಾಟೀಲ, ಎಸ್,ವ್ಹಿ, ಖಣದಾಳೆ, ವ್ಹಿ,ಎಸ್,ಒಡೆಯರ, ಬಾಳೇಶ ಕಮನೂರಿ, ಹಾಗೂ ಮೂರು ಶಾಲೆಗಳ ಶಾಲಾ ಮೇಲುಸ್ತುವಾರಿ ಸದಸ್ಯರು,ಗ್ರಾಮಸ್ತರು, ಹಾಗೂ ಸರಕಾರಿ, ಪ್ರಾಥಮಿ, ಪೌಢ, ಹಾಗೂ ಕಾಲೇಜು ವಿಭಾಗದ ಎಲ್ಲ ಶಿಕ್ಷಕ ಸಿಬ್ಬಂದಿ ಹಾಗೂ ಉಪನ್ಯಾಸಕರ ಬಳಗದವರು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಸಿ,ಬಿ,ಸಿ ಕಮೀಟಿಯವರು ಮೂರು ಶಾಲೆಯ ಶಿಕ್ಷಕ ಹಾಗೂ ಉಪನ್ಯಾಸಕರನ್ನು ವಾರ್ಷಿಕ ಪರೀಕ್ಷೆಯಲ್ಲಿ ಕ್ರಮವಾಗಿ ಮುರು ಸ್ಥಾನ ಪಡೆದ ಪ್ರತಿಭಾವಂತ ವಿಧ್ಯಾರ್ಥಿ ಶಿವಾನಂದ ವೀರಭದ್ರನವರ, ಸಂಜೀವಿನಿ ಗಡಕರಿ, ಹಾಗೂ ದ್ರಾಕ್ಷಾಯಣಿ ಗುಂಡಿ, ವಿದ್ಯಾಥಿಗಳನ್ನು ಇದೆ ಸಂದರ್ಭದಲ್ಲಿ ಸತ್ಕರಿಸಲಾಯಿತು.

promotions

promotions

Read More Articles