ಉತ್ತಮ ನಾಯಕತ್ವದಿಂದ ಸಮಾಜ ಬೆಳೆಯಲು ಸಾಧ್ಯ : ಸುಭಾಷ ಚೌವ್ಹಾಣ

  • 15 Jan 2024 , 2:08 AM
  • Haveri
  • 163

 ಶಿಗ್ಗಾವಿ : ಒಂದು ಸಮಾಜವನ್ನು ಬೆಳಸಬೇಕಾದರೆ ಜನರ ಬೆಂಬಲದ ಜೊತೆಗೆ ಉತ್ತಮ ನಾಯಕತ್ವ ಬೇಕು ಅಂದಾಗ ಸಮಾಜ ಬೆಳೆಯಲು ಸಾದ್ಯ ಎಂದು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಸುಭಾಷ ಚೌವ್ಹಾಣ ಹೇಳಿದರು. ಪಟ್ಟಣದ ಹಳೆಪೇಟೆಯಲ್ಲಿರುವ ವಿಠ್ಠಲ ರುಕಮಾಯಿ ದೇವಸ್ಥಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ಜೊತೆ ಸಂಪರ್ಕ ಹೊಂದಿ, ಸಮಾಜವನ್ನು ಬೆಳೆಯುವ ಕಾರ್ಯಕ್ರಗಳಾಗಬೇಕು ಸಮಾಜದ ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಬೆಳೆಯಲು ಸಾದ್ಯ ಎಂದರು. ಮುಖಂಡ ಸುಧೀರ ಮಾಳವದೆ ಮಾತನಾಡಿ ಸಮಾಜದಲ್ಲಿ ಒಗ್ಗಟ್ಟು ಪ್ರಮುಖವಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಭೀಮರಾವ ಹೀರೂಲಾಲ, ಕೃಷ್ಣಾಜಿರಾವ್ ಕಲಾಲ್, ಕೇದಾರಪ್ಪ ಬಗಾಡೆ, ಪುಂಡಲೀಕರಾವ ಪೋಪಳೆ, ಲಕ್ಷ್ಮಣ ಕುಂದಗೋಳ, ಮಂಜುನಾಥ ದುಬೈ, ಪ್ರತೀಕ ಕೊಳೆಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

promotions

promotions

Read More Articles