ವಿಶ್ವ ಸಾಕ್ಷರತಾ ದಿನಾಚರಣೆ ಆಚರಣೆ

  • 14 Jan 2024 , 10:24 PM
  • Haveri
  • 130

ಶಿಗ್ಗಾವಿ: ಅನಕ್ಷರತೆಯಿಂದ ಮೋಸ, ವಂಚನೆ ದೌರ್ಜನ್ಯಗಳಿಗೆ ಒಳಗಾಗಬೆಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರ ಜೀವನಕ್ಕೆ ಸಾಕ್ಷರತೆ ತುಂಬಾ ಪ್ರಮುಖವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಕೆ.ಚಿಕ್ಕಮಠ ಹೇಳಿದರು. ಪಟ್ಟಣದ ತಾಲೂಕ ಪಂಚಾಯತ್ ಆವರಣದಲ್ಲಿ ತಾಲೂಕ ಲೋಕ ಶಿಕ್ಷಣ ಸಮಿತಿ, ತಾಲೂಕ ಪಂಚಾಯತ ಸಹಯೋಗದಲ್ಲಿ 54 ನೇ ವರ್ಷದ ವಿಶ್ವ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಅವರು, ಸಾಕ್ಷರತೆಗಾಗಿ ವಯಸ್ಸಿನ ಯಾವುದೇ ವಯೋಮಿತಿಯಿಲ್ಲ ಎಲ್ಲರು ಸಾಕ್ಷರತೆ ಹೊಂದಲೆಬೇಕು ಎಂಬ ಸದುದ್ದೇಶದಿಂದ ವಿಶ್ವಮಟ್ಟದಲ್ಲಿ ಸಾಕ್ಷರತಾ ಆಂದೋಲನ ನಡೆಸುತ್ತ ಬಂದಿದ್ದು ಇಂದು 54ನೇ ವರ್ಷದ ವಿಶ್ವ ಸಾಕ್ಷರತಾ ದಿನಾಚರಣೆಯಾಗಿದೆ, ಎಲ್ಲರೂ ಒಂದಾಗಿ ಅನಕ್ಷರತೆಯನ್ನು ತೊಲಗಿಸೋಣ ಎಂದು ಕರೆ ನೀಡಿದರು.
ತಾಲೂಕ ಪಂಚಾಯತ ಅಧ್ಯಕ್ಷರಾದ ಪಾರವ್ವ ಆರೇರ 54ನೇ ಸಾಕ್ಷರತಾ ದ್ವಜಾರೋಹಣವನ್ನು ನೆರವೇರಿಸಿ ಶುಭ ಕೋರಿದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾ.ಲೋ.ಶಿ.ಸ ಕಾರ್ಯದಶಿಗಳು ಆದ ಪ್ರಶಾಂತ ತುರಕಾಣಿ ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ಅಧಿಕಾರಿ ಅಶೋಕ ಕುಂಬಾರ, ತಾ.ಸಾ.ಸಂಯೋಜಕರಾದ ವಾಯ್.ಎಚ್.ಮೇಕಳಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ಹಿತ್ತಲಮನಿ, ಸರ್ಕಾರಿ ಪ್ರೌಢ ಶಾಲೆ ಪ್ರಧಾನ ಗುರುಗಳಾದ ಕೆ.ಎಸ್.ಚಕ್ರಸಾಲಿ, ಎಮ್.ಕೆ.ಬಿ.ಎಸ್.ಶಿಗ್ಗಾಂವ ಶಾಲೆ ಪ್ರ.ಗು ಎಸ್.ಎಸ್.ಹೀರಾಬಾಯಿ, ತಾಲೂಕ ಲೋಕ ಶಿಕ್ಷಣ ಸಮಿತಿ ಸಿಬ್ಬಂದಿಗಳು ಬಾಗವಹಿಸಿದ್ದರು. ಮಲ್ಲಿಕಾರ್ಜುನ ಕಾಳೆ ನಿರೂಪಿಸಿ ವಂದಿಸಿದರು.

promotions

promotions

Read More Articles