ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ

ಬೆಳಗಾವಿ: ಕೆಪಿಸಿಸಿಯ ಮಹತ್ವಾಕಾಂಕ್ಷೆಯ "ಆರೋಗ್ಯ ಹಸ್ತ " ಕಾರ್ಯಕ್ರಮವನ್ನು ಇಂದು ಬೆಳಗಾವಿ ನಗರದ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ‌ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಸಾರ್ವಜನಿಕರಿಗೆ ಸಮಗ್ರ ರೀತಿಯಲ್ಲಿ ಉಪಯುಕ್ತವಾಗಿದ್ದು, ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್ ಗಳ ವತಿಯಿಂದ ಮೂರು ಜನ ಕೊರೋನಾ ವಾರಿಯರ್ಸ್ ಗಳಂತೆ ವಿಂಗಡನೆ ಮಾಡಿದ್ದೇವೆ, ಈ ಕೊರೋನಾ ವಾರಿಯರ್ಸ್ ಗಳು ಪ್ರತಿ ಮನೆ ಮನೆಗೆ ತೆರಳಿ ಕುಟುಂಬದ ಎಲ್ಲ ಸದಸ್ಯರ ತಪಾಸಣೆಗಳೊಂದಿಗೆ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಸಲಹೆಗಳನ್ನು ಹಾಗು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ.

promotions

ಈ ಆರೋಗ್ಯ ಹಸ್ತ ಕಾರ್ಯಕ್ರಮದ‌ಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್‌ ಮೂಲಕ ಮೂರು ಜನರನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ಆರೋಗ್ಯ ಹಸ್ತದ ಕಿಟ್ ಗಳನ್ನು ಹಸ್ತಾಂತರಿಸಲಾಯಿತು, ಈ ಕಿಟ್ ಗಳಲ್ಲಿ ಸುರಕ್ಷಿತ ಫೇಸ್ ಮಾಸ್ಕ್, ಸ್ಯಾನಿಟೈಸರ್ಸ್, ದೇಹ ಸುರಕ್ಷಿತ ಬಟ್ಟೆಗಳು, ಹೆಲ್ಮೆಟ್ ಫೇಸ್ ಶೀಲ್ಡ್, ಪಲ್ಸ್ ಮೀಟರ್, ಥರ್ಮಲ್ ಸ್ಕ್ಯಾನರ್ಸ್, ಹ್ಯಾಂಡ್ ಗ್ಲೊವ್ಸ್ ಹಾಗೂ ಮುಂತಾದ ಅವಶ್ಯಕತೆಯ ವಸ್ತುಗಳನ್ನು ಒಳಗೊಂಡ ಕಿಟ್ ಇದಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಹಸ್ತದ ಸಂಚಾಲಕರಾದ ಸದಾನಂದ ಡಂಗನವರ, ಸಿ ಸಿ ಪಾಟೀಲ ಅಣ್ಣನವರು, ಯಲ್ಲಪ್ಪ ಡೇಕೊಲ್ಕರ್, ಯುವರಾಜಣ್ಣಾ ಕದಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಆರೋಗ್ಯ ಹಸ್ತ ತರಬೇತಿ ಕೇಂದ್ರದ ಮುಖ್ಯಸ್ಥ ಡಾ, ಮಲ್ಟಿನ್, ಅಡಿವೇಶ ಇಟಗಿ, ಸುರೇಶ ಇಟಗಿ, ಮನೋಹರ ಬೆಳಗಾಂವಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles