ದಲಿತರ ಮೇಲೆ ಆಗುತ್ತಿರುವ ಪ್ರಕರಣಗಳ ಬಗ್ಗೆ ತನಿಖೆಗೆ ಆಗ್ರಹ
- 14 Jan 2024 , 3:27 PM
- Belagavi
- 200
ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಆಗುತ್ತಿರುವ ಪ್ರಕರಣಗಳು ಬಹಳ ಆಗುತ್ತಿವೆ ಇದರ ಬಗ್ಗೆ ಕುಲಂಕುಷವಾಗಿ ತನಿಖೆ ಆಗಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಸಂವಿಧಾನದ ಆಶಯವನ್ನೂ ಗಾಳಿಗೆ ತೂರಿ ಏಕಮುಖವಾಗಿ ಹೋಗುತ್ತಿರುವುದು ದುರಂತಕರವಾಗಿದೆ ಎಂದು ತಿಳಿಸಿದರು. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾಗಿದ್ದ ನಾಡು ಇವತ್ತು ಅಶಾಂತಿಯ ನಾಡಾಗಿದೆ. ಈ ರಾಜ್ಯದ ಮೂಲ ನಿವಾಸಿಗಳ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿಯನ್ನು ಮರೆತಂತೆ ಕಾಣುತ್ತಿದೆ ಸರಕಾರ.

ಹಾಗೆಯೇ ಈ ಧೋರಣೆಯನ್ನು ಗಮನಿಸಿದರೆ ದೇಶವನ್ನು ಹಾಗೂ ರಾಜ್ಯವನ್ನೂ ಖಾಸಗಿಕರಣದ ಮೇಲೆ ನಡೆಸುವ ಹುನ್ನಾರ ನಡೆದಿದೆ. ಹಾಗೂ ಮತ್ತೆ ಗುಲಾಮಗಿರಿಯನ್ನು ತರುವ ಉದ್ದೇಶ ಸ್ಪಷ್ಟವಾಗಿದೆ ಎಂದು ತಿಳಿಸಿದರು. ಕೊರೋನಾ ಸಮಯದಲ್ಲಿ ರಾಜ್ಯ ಮತ್ತು ದೇಶದ ಖಜಾನೆಯನ್ನು ಲೂಟಿ ಮಾಡುವ ಕೆಲಸ ನಡೆದಿದೆ ಮತ್ತು ಇಂತಹ ಸಂದರ್ಭದಲ್ಲಿ ದಲಿತರ ಮೇಲೆ ಇಲ್ಲದ ಸಲ್ಲದ ದೌರ್ಜನ್ಯಗಳು ಸಾಮಾನ್ಯವಾಗಿ ನಡೆಯುತ್ತಿದೆ. ಗೋಕಾಕ್ ತಾಲೂಕಿನ ದಲಿತ ಮುಖಂಡನ ಕೊಲೆ, ವಿಜಯಪುರದ ಸಿಂದಗಿ ತಾಲೂಕಿನಲ್ಲಿ ಸವರ್ಣಿಯರ ಕಟ್ಟೆಯ ಮೇಲೆ ಸರಿಸಮಾನವಾಗಿ ಕುಳಿತಿದ್ದಕ್ಕೆ ಅವನನ್ನು ಕೊಲೆ ಮಾಡಲಾಯಿತು. ಹಾಗೆಯೇ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಲಾಗಿದೆ ಇನ್ನು ಹಲವಾರು ದೌರ್ಜನ್ಯಗಳು ದಲಿತರ ಮೇಲೆ ಆಗುತ್ತಲೆ ಇವೆ ಆದ್ದರಿಂದ ಸರಕಾರ ದಲಿತರ ಮೇಲೆ ಆಗುವ ಅನ್ಯಾಯ, ದೌರ್ಜನ್ಯ, ತಡೆಗಟ್ಟುವ ಕೆಲಸ ಆಗುತ್ತಿಲ್ಲ ಎಂದು ಸರಕಾರದ ವಿರುದ್ಧ ಹರಿಹಾಯ್ದರು. ಈ ಮೇಲಿನ ಎಲ್ಲಾ ಅನ್ಯಾಯಗಳನ್ನು ತಡೆಗಟ್ಟಿ ದಲಿತರ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆನಂದ ಅರಬಳ್ಳಿ, ದುರಗಪ್ಪ ಮೇಲಿನಮನಿ, ರವಿ ಸಣ್ಣಕ್ಕಿ, ಬಸವರಾಜ್ ತಳವಾರ್, ಮಲ್ಲೇಶ್ ಕಾಂಬಳೆ ಇನ್ನು ಹಲವಾರು ಉಪಸ್ಥಿತರಿದ್ದರು.











