ಯಾವ ರಾಗಿಣಿ ಇರಲಿ ಪಾಗಿಣಿ ಇರಲಿ ನಮಗೇನು ಸಂಬಂಧವಿಲ್ಲ: ಡಿಸಿಎಂ ಲಕ್ಷಣ ಸವದಿ

ಬೆಳಗಾವಿ: ಚಂದನವನದಲ್ಲಿ ಬೀಸಿರುವ ಡ್ರಗ್ಸ್ ನಶೆಯ ನಂಟಿನ ಕಂಪನ ಸುದ್ದಿ ಹರಿದಾಡುತ್ತಿರುವುದು, ಈಗಾಗಲೇ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಬಗ್ಗೆ ಕೇಳಿದಾಗ.

promotions

ಯಾವ ರಾಗಿಣಿ ಇರಲಿ ಪಾಗಿಣಿ ಇರಲಿ ನಮಗೇನು ಸಂಬಂಧವಿಲ್ಲ, ಡ್ರಗ್ಸ್ ಮಾಫಿಯಾದಲ್ಲಿದ್ದವರು ಜೈಲಿಗೆ ಹೋಗಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆಯಾಗಲಿದೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದರು. ಇಂದು ಬೆಳಗಾವಿಯ ಸಾಮ್ರಾ ವಿಮಾನ ನಿಲ್ದಾಣದಲ್ಲಿ ಮಾತಾನಾಡಿದ ಅವರು ನಟ-ನಟಿಯವರು ಚುನಾವಣೆಯಲ್ಲಿ ಪ್ರಚಾರಕ್ಕೆ ಬರೋದು ಸ್ವಾಭಾವಿಕ. ಡ್ರಗ್ ಮಾಫಿಯಾದಲ್ಲಿ ತನಿಖೆಗೆ ಒಳಪಟ್ಟವರ ಫೋಟೊ ಡಿ.ಕೆ.ಶಿವಕುಮಾರ್,‌ ಸಿದ್ದರಾಮಯ್ಯ ಜೊತೆಗೂ ಇದೆ. ಅವರು ಡ್ರಗ್ಸ್ ಮಾಫಿಯಾದಲ್ಲಿ ಇದ್ದಾರೆಂದು ನಮಗೂ ಗೊತ್ತಿರಲಿಲ್ಲ ಅವರಿಗೂ ಗೊತ್ತಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.

promotions

Read More Articles