ಹಿಂದೂ ಮುಸ್ಲಿಂ ಭಾಂದವರ ಸೌಹಾರ್ದ ಸಭೆ

  • 15 Jan 2024 , 2:06 AM
  • Haveri
  • 183

ಬಂಕಾಪುರ: ಪಟ್ಟಣದ ನೆಹರು ಗಾರ್ಡನ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವಿಸರ್ಜನಾ ವಿಷಯಕ್ಕೇ ಸಂಬಂದಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ದೇವರಾಜ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಯಿತು. ಹಿಂದುಗಳ ಆರಾಧ್ಯ ದೈವ ಶ್ರೀಗಣೇಶನ ಹಬ್ಬದಲ್ಲಿಯೇ ಈ ಹಿಂದಿನಿಂದ ಸದಾ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆದುಕೊಂಡು ಬರುತ್ತಿವೆ. ಈ ಬಾರಿ ಗಣೇಶನ ಮೂರ್ತಿಪ್ರತಿಷ್ಠಾಪನೆ ದಿನದಂದು ವಿವಾದಿತ ದರ್ಗಾದ ಮೇಲೆ ತಗಡಿನ ಶೆಡ್ಡ ಹಾಕಿ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಗಿಸಿರುವುದಲ್ಲದೇ ಹಿಂದುಗಳ ಬಾವನೆಯನ್ನು ಕೆರಳಿಸುವ ಕಾರ್ಯ ಮಾಡಲಾಗಿದೆ. ಆದ್ದರಿಂದ ತಪಿತಸ್ತ ಆರೋಪಿಗಳನ್ನು ಬಂಧಿಸದ ಹೊರತು ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮಾತೇ ಇಲ್ಲ ಎಂದು ಶ್ರೀ ಗಣೇಶ ಮಹಾ ಮಂಡಳಿಯವರು ಪಟ್ಟು ಹಿಡಿದ ಹಿನ್ನಲೆಯಲ್ಲಿ ಬುಧವಾರ ಸಂಜೆ ಎಸ್.ಪಿ.ಯವರ ನೇತೃತ್ವದಲ್ಲಿ ಶ್ರೀ ಗಣೇಶ ಮಹಾ ಮಂಡಳಿ ಸದಸ್ಯರ ಜೊತೆ ಸೌಹಾರ್ಧ ಸಭೆ ನಡೆಯಿತು.

promotions

ಈ ಸಂದರ್ಭದಲ್ಲಿ ಶ್ರೀ ಗಣೇಶ ಮಹಾ ಮಂಡಳಿ ಮುಖಂಡ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಮಾತನಾಡಿ, 2015 ರಲ್ಲಿಯೂ ಕೂಡಾ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಜಾಗೆಯಲ್ಲಿ ಉದ್ದಟತನದಂದ ತಂತಿ ಬೇಲಿ ಹಾಕುತ್ತಿರುವುದನ್ನು ತಡೆದ ನೂರಾರು ಅಮಾಯಕ ಹಿಂದುಗಳ ಮೇಲೆ ಕೇಸ್ ದಾಖಲಿಸಿರುವುದರಿಂದ ಸುಮಾರು ಐದು ವರ್ಷಗಳಿಂದ ಕೋರ್ಟಿಗೆ ಅಲೆಯುವಂತಾಗದೆ. ಹಾಗಾದರೆ ತಪ್ಪು ಮಾಡುತ್ತಿರುವುದನ್ನು ಪ್ರಶ್ನಿಸಿರುವುದೇ ತಪ್ಪಾಯತೆ ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದರು. ಈ ಬಾರಿಯೂ ಕೂಡಾ ಹಬ್ಬದ ದಿನದಂದೇ ರಾತ್ರೋ, ರಾತ್ರಿ ವ್ಯಾಜ್ಯ ವಿರುವ ಜಾಗೆಯಲ್ಲಿ ತಗಡಿನ ಶೆಡ್ಡ ನಿರ್ಮಿಸುವ ಉದ್ದೇಶವಾದರೂ ಏನಿತ್ತು, ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದರಲ್ಲದೇ ಗಣೇಶ ವಿಸರ್ಜನೆ ವೇಳೆ ಮತ್ತೆ ಅಹಿತರ ಘಟನೆ ನಡೆಸಿದರೆ ಅದಕ್ಕೆ ಯಾರು ಹೊಣೆ ? ಆದ್ದರಿಂದ ಎರಡು ಸಮಾಜದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ತಪ್ಪು ಯಾವುದು, ಸರಿಯಾವುದು ಎಂದು ವಿಮರ್ಶಿಸಿ ಅಲ್ಲಿಯವರೆಗೆ ಈ ಬಾರಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಮಾತೇ ಇಲ್ಲ ಎಂದು ಪಟ್ಟು ಹಿಡಿದು ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

promotions

ಇದರ ಸೂಕ್ಷ್ಮತೆಯನ್ನು ಅರಿತ ಪೊಲೀಸ್ ಅಧಿಕಾರಿಗಳು ಮುಸಲ್ಮಾನ ಬಾಂದವರನ್ನು ಕರೆಯಿಸಿ ಚರ್ಚಿಸಿದರು. ನಂತರ ಹಿಂದು, ಮುಸಲ್ಮಾನ ಬಾಂದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಭೆ ನಡೆಸಿದರು. ಸಭೆಯಲ್ಲಿ ವಾದ, ವಿವಾದಗಳು ನಡೆದ ನಂತರ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದ ಹುಸೇನ ಖತೀಬ ರವರು ಹಿಂದೆ ನಡೆದ ಘಟನಾವಳಿಗಳಿಗೆ ಬಹಿರಂಗ ವಿಷಾದವ್ಯಕ್ತ ಪಡೆಸಿದರಲ್ಲದೇ ಶ್ರೀ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಅದರ ಹೊಣೆಗಾರಿಕೆ ಹೊರುವುದಾಗಿ ಹೇಳಿ ಸೌಹಾರ್ಧತೆಗೆ ಸಾಕ್ಷಿಯಾದರು. ಇದಕ್ಕೆ ಸಮ್ಮತಿಸಿದ ಗಣೇಶ ಮಹಾ ಮಂಡಳಿಯ ಸದಸ್ಯರು ಪ್ರತಿಷ್ಠಾಪನೆಯ 21 ದಿನವಾದ ಶುಕ್ರವಾರ ವಿಸರ್ಜನೆ ಯಾಗಬೇಕಾಗಿದ್ದ, ಗಣೇಶ ಮೂರ್ತಿಯನ್ನು ರವಿವಾರ ದಂದು ವಿಸರ್ಜನೆ ಮಾಡಲು ಸಮ್ಮತಿಸಿದರು.

ಈ ಸಂದರ್ಭದಲ್ಲಿ ಸಿ.ಪಿ.ಐ.ಬಸವರಾಜ ಹಳಬಣ್ಣವರ, ಪಿ.ಎಸ್.ಐ. ಸಂತೋಷಗೌಡ ಪಾಟೀಲ, ಗಣೇಶ ಮಹಾ ಮಂಡಳಿ ಅಧ್ಯಕ್ಷ ಈರಣ್ಣ ಬಳಿಗಾರ, ಸೋಮಶೇಖರ ಗೌರಿಮಠ, ಶಿವಾನಂದ ದೇವಸೂರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದಹುಸೇನ ಖತೀಬ, ಮುನ್ನಾ ಗುಲ್ಮಿ, ತಹಮೀದ ಖಾಜಿ, ಕಲಂದರ ಜಂಗಳಿ, ಇಮ್ರಾನಖಾನ ಕನವಳ್ಳಿ, ಮಖ್‍ಬೂಲ ಲಾಲಾನವರ, ರಬ್ಬಾನಿ ತರೀನ, ಜಮೀರ ಹಲ್ಡೆವಾಲೆ, ಅಯೂಬಖಾನ ಪಠಾಣ ರಫೀಕ ಬಡಿಗೇರ, ನಿಂಗಪ್ಪ ಹೋಸಮನಿ ಸೇರಿದಂತೆ ಇತರರು ಇದ್ದರು.

Read More Articles