ಸುವರ್ಣ ಸೌಧದ ಮುಂಬಾಗ ಮಹನೀಯರ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು: ಮಹೇಶ ಶಿಗಿಹಳ್ಳಿ
- 14 Jan 2024 , 10:07 PM
- Belagavi
- 152
ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ 2012ರಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಆಗಿದೆ. ಈ ಭಾಗದ ಜನರಿಗೆ ದೂರದ ಬೆಂಗಳೂರಿನ ವರೆಗೆ ಹೋಗಿ ಕೆಲಸ ಮಾಡಿಕೊಳ್ಳುವ ತಾಪತ್ರಯ ತಪ್ಪಿದೆ ಆದ್ದರಿಂದ ಸರ್ಕಾರಕ್ಕೆ ಹಾಗೂ ಸುವರ್ಣ ವಿಧಾನ ಸೌಧ ನಿರ್ಮಾಣ ಆಗಲು ಕಾರಣಿ ಭೂತರಾದ ಆದವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಆದರೆ ಸರ್ಕಾರ ಈ ಉತ್ತರ ಕರ್ನಾಟಕದ ಕೀರ್ತಿ ಕಳಸ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂಬಾಗ ನಾಡು, ನುಡಿಗಾಗಿ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಆದಿಕವಿ ವಾಲ್ಮೀಕಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿಶ್ವಗುರು ಬಸವೇಶ್ವರ ಸೇರಿದಂತೆ ಈ ಐವರು ಮಹನಿಹರ ಮೂರ್ತಿಗಳನ್ನು ಸರ್ಕಾರ ಪ್ರತಿಷ್ಠಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದಿಂದ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ಸರ್ಕಾರ ನಮ್ಮ ಮನವಿಯನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಮುಂಬರುವ ದಿನಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಆಗಬೇಕು ಇಲ್ಲದಿದ್ದರೆ ಸುವರ್ಣ ಸೌಧದ ಎದುರು ಇರುವ ಹೆದ್ದಾರಿಯನ್ನು ತಡೆದು ಆವರಣದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ಸದಸ್ಯರು ಉಪಸ್ಥಿತರಿದ್ದರು.











