ಬಿಜೆಪಿ ಪಕ್ಷ ಕಾರ್ಯಕರ್ತರ ಶ್ರಮದಿಂದ ಬೆಳೆದು ಬಂದ ಪಕ್ಷವಾಗಿದೆ; ಡಾ.ರಾಜೇಶ ನೇರ್ಲಿ

ಹುಕ್ಕೇರಿ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿ.ಜೆ.ಪಿ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಮನೆ-ಮನೆಗೆ ತೆರಳಿ ತಿಳಿಸುವ ಮೂಲಕ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ ಎಲ್ಲ ಕಡೆಗೆ ಜಯಗಳಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಸಚಿವ ಶಶಿಕಾಂತ ನಾಯಿಕ ಕರೆ ನೀಡಿದ್ದಾರೆ. ಹತ್ತರಗಿಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಉತ್ತರ ಮಂಡಳದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಶಿಕಾಂತ ನಾಯಿಕ ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗಕ್ಕೆ ಚಾಲನೆ ನೀಡಿರುವ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಕಾರ್ಯ ಶ್ಲಾಘನೀಯ ಆಗಿದೆ. ಅದರಂತೆ ಬೆಳಗಾವಿ-ಕೊಲ್ಲಾಪೂರ ನಡುವೆ ನೇರ ರೈಲು ಮಾರ್ಗ ರಚನೆಯಾದರೆ ಕೃಷಿ, ಹೈನೋದ್ಯಮ, ವ್ಯಾಪಾರ ವಹಿವಾಟಿಗೆ ಮತ್ತು ಜನ ಸಂಚಾರಕ್ಕೆ ಅನುಕೂಲವಾಗುತ್ತದೆ ಇದರ ಬಗ್ಗೆ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಪ್ರಯತ್ನಿಸಬೇಕು ಎಂದು ಹೇಳಿದರು.

promotions

ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿದ ಭಾರತೀಯ ಜನತಾ ಪಕ್ಷದ ಚಿಕ್ಕೋಡಿ ವಿಭಾಗದ ಬಿ.ಜೆ.ಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಅವರು ಮಾತನಾಡಿ, ಬಿ.ಜೆ.ಪಿ ವಂಶ ಪರಂಪರೆಯ ಪಕ್ಷವಲ್ಲ. ಅದು ಕಾರ್ಯಕರ್ತರ ಶ್ರಮದಿಂದ ಬೆಳೆದು ಬಂದ ಪಕ್ಷ ಆಗಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವ ಹಾಗೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನಸಮುದಾಯಕ್ಕೆ ಹತ್ತಿರವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಬಿ.ಜೆ.ಪಿ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ, ಯಮಕನಮರಡಿ ಉತ್ತರ ಮಂಡಳದ ಬಿ.ಜೆ.ಪಿ ಅಧ್ಯಕ್ಷ ಶ್ರೀಶೈಲ ಮಠಪತಿ, ಬಿ.ಜೆ.ಪಿ ಮುಖಂಡರಾದ ಕಲಗೌಡ ಪಾಟೀಲ, ಮಹಾವೀರ ನಾಶಿಪುಡಿ, ರಾಜು ಮಠಪತಿ, ರಮೇಶ ಚೇತಗೌಡ, ಸತೀಶ, ಪ್ರಸಾದ ಪಚಂಡಿ, ಶಿವಾನಂದ ಮಸಗುಪ್ಪಿ, ಈರಣ್ಣ ಗುರವ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles