ಸಶಕ್ತ ಭಾರತ ನಿರ್ಮಾಣ ಮಾಡಿದ ನರೇಂದ್ರ ಮೊದಿಯವರ ಕಾರ್ಯ ಶ್ಲಾಘನೀಯ
- 15 Jan 2024 , 2:24 AM
- Belagavi
- 101
ಬೆಳಗಾವಿ: ನಮ್ಮ ದೇಶದ ಪ್ರಧಾನ ಸೇವಕ ನರೇಂದ್ರ ಮೊದಿಜೀ ಅವರ ಜನ್ಮದಿನವನ್ನ ಸಮಾಜ ಸೇವೆಯ ಮೂಲಕ ಆಚರಿಸುತ್ತಿರುವುದು ಬಿಜೆಪಿಯ ವಿಶೇಷತೆಯಾಗಿದೆ ಎಂದು ಜಿಲ್ಲಾ ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಮೊಹಿತೆ ಹೇಳಿದರು. ತಾಲೂಕಿನ ಬೆನಕನಹಳ್ಳಿಯ ಸರ್ಕಾರಿ ಕನ್ನಡ-ಮರಾಠಿ ಶಾಲೆಯಲ್ಲಿ ಪ್ರಧಾನಿಗಳ 70ನೇ ಜನ್ಮದಿನಾಚರಣೆ ಅಂಗವಾಗಿ ಸ್ಚಚ್ಛಭಾರತ ಅಭಿಯಾನ ಹಾಗೂ ಕೊವಿಡ್19 ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ದೇಶದ ಸುರಕ್ಷತೆಗೆ ಮಾರಕವಾಗಿದ್ದ ಜಮ್ಮು ಕಾಶ್ಮೀರ 365 ನೇ ವಿಧಿ, ಮುಸ್ಲಿಂ ಮಹಿಳೆಯರ ಜೀವನ ಕಿತ್ತು ತಿನ್ನುತ್ತಿದ್ದ ತ್ರಿವಳಿ ತಲಾಕ, ಪ್ರಪಂಚಕ್ಕೆ ಮಾರಕವಾದ ಕರೊನಾ ಮಹಾಮಾರಿಯಲ್ಲಿ 20 ಲಕ್ಷ ಕೋಟಿ ಆತ್ಮನಿರ್ಭಾರ ಭಾರತಕ್ಕೆ ನಿಡುವದರೊಂದಿಗೆ ಸಶಕ್ತ ಭಾರತ ನಿರ್ಮಾಣ ಮಾಡಿದ ನರೇಂದ್ರ ಮೊದಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಮತ್ತೊರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಮಾತನಾಡಿ, 500 ವರ್ಷಗಳ ರಾಮಮಂದಿರಕ್ಕೆ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿ ದೇಶದ ಜನತೆಗೆ ಸುಭದ್ರ ಆಡಳಿತ ನೀಡುವದರೊಂದಿಗೆ ಜನಸಾಮಾನ್ಯರ ಆಳನ್ನು ಅರಿತು ಕೃಷಿಕರಿಗೆ, ಕೂಲಿ ಕಾರ್ಮಿರಿಗೆ ಹಾಗೂ ಬಿದಿ ವ್ಯಾಪಾರಸ್ಥರಿಗೆ ಸಹಾಯ ಹಸ್ತ ನೀಡುವದರೊಂದಿಗೆ ದೇಶದ ಕಾಯಕ ಜೀವಿಗಳಿಗೆ ಅಭಯ ನೀಡಿದ್ದಾರೆ. ಅಲ್ಲದೆ ಕರೊನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ವೈದ್ಯರು, ನರ್ಸ, ಪೊಲೀಸ್, ಕರ್ಮಚಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯವನ್ನು ಯಾರು ಮರೆಯುವಂತಿಲ್ಲ ಆದ್ದರಿಂದ ಅವರಿಗೆ ಈ ಸಂದರ್ಭದಲ್ಲಿ ಸತ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಜಿಲ್ಲಾ ಕಾರ್ಯದರ್ಶಿ ರಂಜನಾ ಕೋಲಕಾರ, ಜಿಲ್ಲಾ ಅಲ್ಪಸಂಖ್ಯಾತ ಮೊರ್ಚಾ ಶಾಲು ಫರ್ನಾಂಡೀಸ್, ಡಾ.ಯಲ್ಲಪ್ಪ ಪಾಟೀಲ,ಅರುಣ ಕೋಲಕಾರ, ಅಭಯ ಅವಲಕ್ಕಿ, ಭಾಪು ಪಾಟೀಲ, ನೀತಿನ ಚೌಗಲಾ ಹಾಗೂ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.












