ದೇಶ ಕಂಡ ಅಪ್ರತಿಮ ನಾಯಕ ನರೇಂದ್ರ ಮೋದಿ; ಶಶಿಕಾಂತ ನಾಯಿಕ

ಹುಕ್ಕೇರಿ: ದೇಶಕ್ಕಾಗಿ ದನಿವಿಲ್ಲದೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ದೇಶ ಸೇವೆಯು ಶ್ಲಾಘನೀಯವಾದದ್ದು ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದ್ದಾರೆ. ಗುರುವಾರ ದಿ. 17 ರಂದು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮಿನ ಮಹಿಳಾ ಕಲ್ಯಾಣ ಸಂಸ್ಥೆಯ ಆಶ್ರಯ ಸ್ವಧಾರ ಗೃಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟು ಹಬ್ಬದ ನಿಮಿತ್ತ ಬಿಜೆಪಿ ಕಾರ್ಯಕರ್ತರು ನಿರ್ಗತಿಕ ಮಹಿಳೆಯರಿಗೆ ಮಕ್ಕಳಿಗೆ ಹಣ್ಣು ಹಂಪಲ ವಿತರಿಸಿ ಮಾತನಾಡಿದ ಶಶಿಕಾಂತ ನಾಯಿಕ ದೇಶದಲ್ಲಿ ಅತ್ಯಂತ ಜಟೀಲವಾದ ಸಮಸ್ಯೆಗಳನ್ನು ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಇತ್ಯರ್ಥಗೊಳಿಸಿದ್ದಾರೆ.

promotions

ರಾಮಜನ್ಮಭೂಮಿ ವಿವಾದ ಸೌಹಾರ್ದತೆಯಿಂದ ಬಗೆಹರಿಸಿ ಮತ್ತು ಕಾಶ್ಮೀರದಲ್ಲಿ 370ನೇ ವಿದಿ ಜಾರಿಗೆ ತಂದು ಕಾಶ್ಮೀರವನ್ನು ಒಂದು ಉತ್ತಮ ದಿಕ್ಕಿನಲ್ಲಿ ಕೊಂಡೊಯೊದಿದ್ದಾರೆ. ಮೋದಿಯವರಂತೆ ಸಮಾಜ ಸೇವೆಯನ್ನು ಮಾಡುವ ಮನೋಭಾವನೆ ಪ್ರತಿಯೊಬ್ಬ ಭಾರತೀಯ ಮೂಡಿಬರಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ವಿಭಾಗ ಬಿಜೆಪಿ ಪ್ರದಾನ ಕಾರ್ಯದರ್ಶಿ ಕಲಗೌಡ ಪಾಟೀಲ, ಹುಕ್ಕೇರಿ ಮಂಡಳದ ಬಿಜೆಪಿ ಅಧ್ಯಕ್ಷ ರಾಚಯ್ಯ ಹಿರೇಮಠ, ಬಸವರಾಜ ಉದೋಶಿ, ಪರಶುರಾಮ ಬಸನಾಯ್ಕ, ರಾಘವೇಂದ್ರ ದೇಶಪಾಂಡೆ, ದೀಪಕ ಪಟೇಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ರಾಧಿಕಾ ಬಡಿಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

promotions

Read More Articles