ಶ್ರೀ ವಿಶ್ವಕರ್ಮ ಹಾಗೂ ಶ್ರೀ ನಾರಾಣ ಸ್ವಾಮಿಜಿಯವರ ಜಯಂತಿ ಆಚರಣೆ

  • 15 Jan 2024 , 3:34 AM
  • Haveri
  • 113

ಶಿಗ್ಗಾವಿ: ಶ್ರೀ ವಿಶ್ವಕರ್ಮರು ಜಗದ ನಿರ್ಮಾತರು ಎಂಬ ನುಡಿ ನಮ್ಮ ಪುರಾತನ ಪುರಾಣ ಗ್ರಂಥಗಳಲ್ಲಿದೆ. ಅಂತ ಮಹಾನ ದೈವಿ ಪುರುಷರ ಹಾಗೂ ಆರ್ಯ ಈಡಿಗ ಸಮಾಜದ ಶ್ರೀ ಗುರು ಸಾರ್ವಭೌಮ ನಾರಾಣ ಸ್ವಾಮಿಜಿಯವರ ಜಯಂತಿ ಒಟ್ಟಾಗಿ ಆಚರಿಸುತ್ತಿರುವದು ನಮ್ಮೆಲ್ಲರ ಬಾಗ್ಯ ಎಂದು ತಹಶಿಲ್ದಾ ಪ್ರಕಾಶ ಕುದರಿ ಹೇಳಿದರು. ಪಟ್ಟಣದ ತಹಶಿಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕ ಆಡಳಿತ, ತಾಲೂಕ ಹಾಗೂ ಶಹರ ವಿಶ್ವಕರ್ಮ ಸಮಾಜ ಹಾಗೂ ತಾಲೂಕ ಆರ್ಯ ಈಡಿಗ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಹಾಗೂ ಶ್ರೀ ಗುರು ಸಾರ್ವಭೌಮ ನಾರಾಣ ಸ್ವಾಮಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಈ ಮಹಾನ ಜಯಂತಿ ಜಗತ್ತಿಗೆ ಹರಡಿರುವ ಕರೋನಾ ಪೀಡೆಯನ್ನು ತೊಲಗಿಸಲಿ, ನಮ್ಮ ನಿಮ್ಮೆಲ್ಲರ ಕಾರ್ಯಗಳಲ್ಲಿ ಪ್ರಾಮಾಣಿಕ, ನಿಷ್ಟೆ, ಶೃದ್ದೆಯಿಂದ ಕೆಲಸ ಮಾಡುವ ಶಕ್ತಿಯನ್ನು ತುಂಬಲಿ ಎಂದರು.

promotions

ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳಪ್ಪ ಬಡಿಗೇರ, ಉಪಾಧ್ಯಕ್ಷ ನಾರಾಯಣಪ್ಪ ಬಡಿಗೇರ, ಕಾರ್ಯದರ್ಶಿ ಬಂಕಪ್ಪ ಬಡಿಗೇರ, ತಾಲೂಕ ಆರ್ಯ ಈಡಿಗ ಸಮಾಜದ ಅಧ್ಯಕ್ಷ ರಾಜೀವ. ಎಸ್. ಈಳಿಗೇರ, ಕಾರ್ಯದರ್ಶಿ ಮಲ್ಲಿಕಾರ್ಜುನ ಈಳಿಗೇರ, ಪೂಜಾ ವಿಧಾನ ನೆರವೇರಿಸಿದರು. ಕರವೆ ಜಿಲ್ಲಾದ್ಯಕ್ಷ ಮಂಜುನಾಥ ಓಲೆಕಾರ, ಕರವೆ ಮಹಿಳಾ ಜಿಲ್ಲಾಧ್ಯಕ್ಷ ಸಂತೋಷಮಾತಾ ಬಡಿಗೇರ, ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಮೌನೇಶ್ವರ ಜಿರ್ಣೊದ್ದಾರ ಕಮಿಟಿ ಅಧ್ಯಕ್ಷ ಮನೋಹರ ಸಂಶಿ, ನ್ಯಾಯವಾದಿಗಳಾದ ಎಸ.ಎಮ್.ಕಮ್ಮಾರ, ಪ್ರಕಾಶ ಬಡಿಗೇರ, ಎ.ಪಿ.ಎಮ್.ಸಿ ಅಧ್ಯಕ್ಷ ಅರ್ಜಪ್ಪಾ ಲಮಾಣಿ, ಈರಣ್ನ ಡವಗಿ, ಮಾಜಿ ತಾಪಮ ಅಧ್ಯಕ್ಷರಾದ ಉಷಾ ಬಿಳೆಕುದರಿ, ಲಕ್ಷಮವ್ವ ತೋಟದ, ನಿಂಗಪ್ಪ ಕಮ್ಮಾರ,ಮ್ಯಲಾರಪ್ಪ ಕಮ್ಮಾರ, ಪುವಾಚಾರಿ ಬಡಿಗೇರ, ಅಶೋಕ ಈಳಿಗೇರ, ಶಿದ್ದಪ್ಪಾ ಈಳಿಗೇರ, ರೇವಣಪ್ಪ ಈಳಿಗೇರ, ಬಸಪ್ಪ ಈಳಿಗೇರ, ಪಕ್ಕೀರೇಶ ಈಳಿಗೇರ, ವೀರಭದ್ರಪ್ಪಾ ಕಮ್ಮಾರ, ಶಂಕ್ರಪ್ಪ ಬಡಿಗೇರ,ಮೌನೇಶ ಬಡಿಗೇರ, ಚೆನ್ನಪ್ಪ ಬಡಿಗೇರ, ವಿಶ್ವಕರ್ಮ ಪ್ರಶಸ್ತಿ ಪುರಸ್ಕೃತ ನಾಗಲಿಂಗ ಬಡಿಗೇರ, ಮಾಲತೇಶ ಬಡಿಗೇರ, ಪ್ರಕಾಶ ಬಡಿಗೇರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles