ಶೌಚಾಲಯಕ್ಕೆಂದು ತೆರಳಿದ್ದ ಬಾಲಕ ಒಮ್ಮೇಲೆ ನಾಪತ್ತೆ
- 17 Dec 2023 , 10:39 PM
- Vijayapur
- 99
ವಿಜಯಪುರ : ಬಸವನ ಬಾಗೆವಾಡಿ ತಾಲೂಕಿ ನರಸಲಗಿ ಎಲ್ ಟಿ ತಾಂಡಾದ ನಾಮದೇವ ರಾಠೋಡ ಎಂಬುವರ ಮಗ ಉಮೇಶ ರಾಠೋಡ 16 ವರ್ಷದ ವಿದ್ಯಾರ್ಥಿ ದಿಡಿರಣೆ ನಾಪತ್ತೆಯಾಗಿದ್ದಾನೆ. ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಗಳಿಸುವ ಮೂಲಕ ಉತ್ತಮ ಶ್ರೇಣಿಯಲ್ಲಿ ಪಾಸಾಗಿ ವಿಜಯಪುರದ ಮೂರಾರ್ಜಿ ದೇಸಾಯಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆದರೆ ಶನಿವಾರ ದಿನಾಂಕ 19-09-2020 ರಂದು ಬೆಳಗ್ಗೆ 10.30 ಕ್ಕೆ ತನ್ನ ತಂದೆಗೆ ಶೌಚಾಲಯಕ್ಕೆಂದು ಹೇಳಿ ತೆರಳಿದ್ದ ಆತ ಒಮ್ಮೇಲೆ ನಾಪತ್ತೆಯಾಗಿದ್ದಾನೆ. ಆತನು ಯಾರೊಂದಿಗೂ ಅಷ್ಟು ಬೆರೆಯದ ವಿದ್ಯಾರ್ಥಿಯಾಗಿದ್ದು ತನ್ನ ಪಾಡಿಗೆ ತಾನಿರುತ್ತಿದ್ದ ಎನ್ನುತ್ತಾರೆ ಪಾಲಕರು. ಆದರೆ ಏಕಾಏಕಿ ನಾಪತ್ತೆಯಾಗಿದ್ದು ಹೆತ್ತವಿರಿಗೆ ತೀವ್ರ ಚಿಂತಾಜನಕವಾಗಿಸಿದೆ. ನೋಡಲು ಸಾಧಾರಣ ಮೈಕಟ್ಟು, ತೆಳ್ಳಗೆ ಉದ್ದನೆಯ ಕೂದಲು, ತಿಳಿ ಬಣ್ಣದ ಹಾಪ ಅಂಗಿ ತೊಟ್ಟಿದ್ದು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ತಿಳಿಸಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಾಲಕನು ಎಲ್ಲಿಯಾದರು ಕಂಡಲ್ಲಿ ಕೂಡಲೇ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ. 6361278804, 7022117749, 9902953865












