ಸವದತ್ತಿ: ರಾಜ್ಯದಲ್ಲಿ ಕೋರೊನಾ ವೈರಸ್ ಹಾಗೂ ಲಾಕ್ ಡೌನ ದಿಂದಾಗಿ ಎಲ್ಲ ದೇವಸ್ಥಾನಗಳು ಬಂದ ಮಾಡಲಾಗಿದೆ. ಇದರಿಂದ ಹಲವಾರು ಅರ್ಚಕರು ದಕ್ಷಿಣೆ ಹಾಗೂ ಪೂಜಾ ಕಾರ್ಯಗಳ ಮೂಲಕ ತಮ್ಮ ಜೀವನ ವನ್ನು ನಡೆಸುತ್ತಿದ್ದರು ಆದರೆ ಕೋರೊನಾ ಲಾಕ್ ಡೌನ ನಿಂದಾಗಿ ಅರ್ಚಕರಿಗೆ ತಮ್ಮ ಜೀವನ ನಡೆಸಲು ತೊಂದರೆ ಇರುವ ಮನಗಂಡು ಸವದತ್ತಿ ತಾಲೂಕು ಸಭಾಂಗಣದಲ್ಲಿ ಯಲ್ಲಮ್ಮ ದೇವಸ್ಥಾನದ ವತಿಯಿಂದ ಚಿಕ್ಕ ದೇವಸ್ಥಾನ ಅರ್ಚಕರಿಗೆ ಇಂದು ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸಲಾಯಿತು.