ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದ ದೇವರಗುಡ್ಡದ ಪ್ರಧಾನ ಅರ್ಚಕರು
- 15 Jan 2024 , 6:47 AM
- Haveri
- 109
ರಾಣೇಬೆನ್ನೂರ : ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ ಪೂಜಾರರು 5 ಸಾವಿರ ಮಾಸ್ಕಗಳ ವಿತರಣೆ ಮಾಡಿದರು.

ಸೆ.21ರಿಂದ 28ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 5ಸಾವಿರ ಮಾಸ್ಕಗಳನ್ನು ಹಾವೇರಿ ಡಿಡಿಪಿಐ ಅಂದಾನೆಪ್ಪ ವಡಿಗೇರ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಗಳನ್ನು ನೀಡಲಾಗಿದೆ. ಕಳೆದ ಜೂನ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿಯೂ ಸಹ 20 ಸಾವಿರ ಮಾಸ್ಕ್, ಸ್ಯಾನಿಟೈಸರ್ ಹಾಗೂ ನೀರಿನ ಬಾಟಲ್‍ಗಳನ್ನು ತಾಲೂಕಿನ ಶಾಸಕ ಅರುಣಕುಮಾರ ಪೂಜಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಗಿತ್ತು. ಅದರಂತೆ ಪೂರಕ ಪರೀಕ್ಷೆಗೂ ಮಾಸ್ಕಗಳನ್ನು ವಿತರಿಸಲಾಗಿದೆ, ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಾಗುವುದಿಲ್ಲ. ಸರ್ಕಾರದ ಜೊತೆಗೆ ಜನರ ಸಹಕಾರ ಅತ್ಯವಶ್ಯಕ ಎಂದರು.

ಈ ಸಂದರ್ಭದಲ್ಲಿ ದೇವರಗುಡ್ಡ ಭಂಡಾರದ ಗುರುಗಳು ಮಲ್ಲಪ್ಪಯ್ಯ ವಡಿಯರ್, ಫಕ್ಕೀರಪ್ಪ ಐಗಳ, ದ್ಯಾವಪ್ಪ ವಾಸರದ, ವಕೀಲ ನಾಗರಾಜ ಸಂಶಿ, ಶಿದ್ದಪ್ಪ ಬೇವಿನಹಳ್ಳಿ, ಕೋಟೆಪ್ಪ ಸತಗಿ, ಮಾಲತೇಶ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಮಲ್ಲಾರಿ ಪದಕಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.










