ಒರ್ವ ದರೋಡೆಕೋರನ ಬಂಧನ
- 14 Jan 2024 , 11:14 PM
- Haveri
- 210
ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಬಳಿ ಕ್ರಷರನ ಕಾವಲುಗಾರನಿಗೆ ಚಾಕು ತೋರಿಸಿ ಹೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಮೂವರು ತಲೆಮರೆಸಿಕೊಂಡಿದ್ದು ಹುಡುಕಾಟದಲ್ಲಿ ತೊಡಗಿದ್ದಾರೆ. ಮೋಟೆಬೆನ್ನೂರು ಬಳಿ ರುದ್ರೇಶ ಚೂರಿ ಎಂಬುವರಿಗೆ ಸೇರಿದ್ದ ಗಜಲಕ್ಷ್ಮಿ ಸ್ಟ್ರೋನ್ ಕ್ರಷರಗೆ ನುಗ್ಗಿದ ತುಮಕೂರು ಮೂಲದ ದರೋಡೆಕೋರರ ತಂಡ ಸೆ.10 ರಂದು ತಡರಾತ್ರಿ ಕಾವಲು ಕಾಯುತ್ತಿದ್ದ ವ್ಯಕ್ತಿಗೆ ನಾಲ್ವರು ಕಾರಿನಲ್ಲಿ ಬಂದಿಳಿದು ಚಾಕು ತೋರಿಸಿ, ಬೆದರಿಸಿ ಒಳಗಿದ್ದ ಸುಮಾರು ಐದು ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳನ್ನು ದೊಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬ್ಯಾಡಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ ಕೆ.ಜಿ, ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಳದುಂಡಿ, ಡಿಎಸ್‍ಪಿ ವಿಜಯಾನಂದ ಎಂ ಇವರ ಮಾರ್ಗದರ್ಶನದಲ್ಲಿ ಆರೋಪಿಯಾದ ಅಲ್ಲಾಭಕ್ಷ, ಅತ್ತಾವುಲ್ಲಾ ತುಮಕೂರು ಎಂಬುವನನ್ನು ಹಾಗೂ ದರೋಡೆ ಮಾಡಿದ ಸಾಮಗ್ರಿಗಳು, ಕೃತ್ಯಕ್ಕೆ ಬಳಸಿದ ಕಾರು ಸಹಿತ ಶನಿವಾರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಬಸವರಾಜ ಪಿ.ಎಸ್, ಪಿಎಸ್‍ಐ ಮಹಾಂತೇಶ ಎಂ.ಎಂ, ಸಿಬ್ಬಂದಿಗಳಾದ ಕೆ.ಎಂ.ಗಡಿಯಪ್ಪಗೌಡ್ರ, ಎಚ್.ಜಿ.ಕಡೇಮನಿ, ಲೋಕೇಶ ಲಮಾಣಿ, ಮೃತ್ಯುಂಜಯ ಎಚ್. ಸೇರಿದಂತೆ ಇತರರು ಉಪಸ್ಥಿತರಿದ್ದರು.












