ರಾಜ್ಯದಲ್ಲಿ ಪ್ರಾಯೋಗಿಕವಾಗಿ 2 ವಿಶೇಷ ರೈಲುಗಳ ಸಂಚಾರ; ಸುರೇಶ ಅಂಗಡಿ
- 15 Jan 2024 , 2:36 AM
- Belagavi
- 106
ಅವರು ಬುಧವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ಮೇ 22ರಿಂದ ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಹೊರಡುವ ಹೊಸ ವಿಶೇಷ ರೈಲ್ವೆ ಬೆಳಗಾವಿಗೆ ಸಂಜೆ 6-30 ಗಂಟೆಗೆ ತಲುಪಲಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರೈಲ್ವೆ ಬೆಳಿಗ್ಗೆ 9-20 ಬಿಟ್ಟು ಮಧ್ಯಾಹ್ನ 12-45 ಕ್ಕೆ ಮೈಸೂರ ತಲುಪಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮೇರೆಗೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಎರಡು ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿದೆ ಎಂದರು. ಪ್ರಯಾಣಿಕರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಟಿಕೆಟ್ ಕನ್ಫರ್ಮ್ ಆದ ಮೇಲೆಯೇ ರೇಲ್ವೆ ನಿಲ್ದಾಣಕ್ಕೆ ಬರಬೇಕು.ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತಾ ಕ್ರಮ ಅನುಸರಿಸುವಂತೆ ರೈಲ್ವೆ ಪ್ರಯಾಣಿಕರಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮನವಿ ಮಾಡಿಕೊಂಡಿದ್ದಾರೆ.











