ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರು : ಹರ್ಷವರ್ಧನ ಪೂಜಾರಿ

ವಿಜಯಪುರ: ಜೈ ಭೀಮ ಯುವಕ ಸಂಘದ ವತಿಯಿಂದ ಜಾಲವಾದ ಗ್ರಾಮದಲ್ಲಿ ಸಂವಿಧಾನಶಿಲ್ಪಿ, ವಿಶ್ವಜ್ಞಾನಿ, ಭಾರತರತ್ನ ಬಾಬಾಸಾಹೇಬ್ ಡಾ||ಬಿ.ಆರ್.ಅಂಬೇಡ್ಕರ್ ರವರ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನೆ ಮಾಡುವ ಮೂಲಕ ಜೀ ಕನ್ನಡ ವಾಹಿನಿಯ ಶ್ರೀ ರಾಘವೇಂದ್ರ ಹುಣಸೂರು ರವರಿಗೆ ಅಭಿನಂದನೆ ಸಲ್ಲಿಸಲಾಯಿತು.

promotions

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹರ್ಷವರ್ಧನ ಪೂಜಾರಿ ಮಾತನಾಡಿ ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು, ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡಿದ್ದರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಗಂಧದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ತಂದು ಕೊಟ್ಟ ಮಹಾನ ತತ್ವಜ್ಞಾನಿ ಎಂದು ಅವರು ನಮ್ಮ ಇಡೀ ಜಗತ್ತಿಗೆ ಮಾದರಿ ಎಂದರು.

promotions

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ Y.C ಮಯೂರ ಹಾಗೂ ಮತ್ತು ದೇವರಹಿಪ್ಪರಗಿ ತಾಲೂಕಿನ ಡಿಎಸ್ಎಸ್ ಸಂಚಾಲಕರಾದ ಪ್ರಕಾಶ ಗುಡಿಮನಿ ಯವರು ಭಾಗವಹಿಸಿದರು .ಅಧ್ಯಕ್ಷತೆ ವಹಸಿಕೊಂಡಿದ ಮಯೂರ್ ಸರ್ ಅವರು ಶನಿವಾರ ಮತ್ತು ಭಾನುವಾರದಂದು ಸಂಜೆ ಕರೆಂಟ್ ತೆಗೆಯಬಾರದು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು ಕಾರ್ಯಕ್ರಮವನ್ನು ಸಚಿನ್ ಕೋಟಗಿ ಅವರು ನಡೆಸಿಕೊಟ್ಟರು ಈ ಸಮಯದಲ್ಲಿ ಧರ್ಮಣ್ಣ ಕನ್ನೋಳಿ. ಬಾಗವಾನ.ಸಂಜು.ಆನಂದ. ಸಂತೋಷ್. ಶ್ರೀಕಾಂತ. ಗ್ಯಾನಪ್ಪ್. ಶಿವರಾಜ .ಇನ್ನು ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Read More Articles