ಹಣ ಕೊಡಿಸಿ ಪ್ರಾಣ ಉಳಿಸಿ ಎಂದು ಅಗ್ರೀ ಗೋಲ್ಡ್ ಠೇವಣಿದಾರರಿಂದ ಪ್ರತಿಭಟನೆ.
- 15 Jan 2024 , 2:20 AM
- Belagavi
- 221
ಬೆಳಗಾವಿ : ಅಗ್ರೀ ಗೋಲ್ಡ್ ಕಂಪನಿಯಿಂದ ಲಕ್ಷಾಂತರ ಜನ ಠೇವಣಿದಾರರಿಗೆ ವಂಚನೆ ಮಾಡಿದ್ದಾರೆ. ಕೂಡಲೇ ಸರಕಾರ ಅದರ ಮೇಲೆ ಕ್ರಮ ಕೈಗೊಂಡು ಠೇವಣಿದಾರರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಠೇವಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಆಂದ್ರಪ್ರದೇಶ ಮೂಲದ ಅಗ್ರೀ ಗೋಲ್ಡ್ ಸಂಸ್ಥೆ ವಿಜಯವಾಡದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಸ್ಥಾಪಿಸಿಕೊಂಡು ಗ್ರಾಹಕರಿಂದ ಠೇವಣಿ ಸಂಗ್ರಹಿಸಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಅತಿ ಹೆಚ್ಚು ಆಸ್ತಿಯನ್ನು ಆಂದ್ರಪ್ರದೇಶದ ಉದ್ದಗಲಕ್ಕೂ ಹೊಂದಿರುತ್ತದೆ.

ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಸುಮಾರು 8.5 ಲಕ್ಷ ಗ್ರಾಹಕರಿಂದ ಅಂದಾಜು 2500 ಕೋಟಿ ರೂ. ಹಣ ಠೇವಣಿಯಾಗಿ ಸಂಗ್ರಹಿಸಿದ ಈ ಸಂಸ್ಥೆ ಎಲ್ಲ ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಮಾನ್ಯ ಜಂಟಿ ಉಚ್ಚನ್ಯಾಯಾಲಯದಲ್ಲಿ ತೆಲಂಗಾಣ ರಾಜ್ಯಕ್ಕೆ ಸೇರಿದ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ವೇದಿಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಈ ಪ್ರಕರಣದಲ್ಲಿ ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಸಾರ್ವಜನಿಕ ಹಿತಾಸಕ್ತಿ ಕೇವಲ ಆಂಧ್ರಪ್ರದೇಶ ಮತ್ತು ರಾಜ್ಯ ಸರಕಾರಗಳು ಮತ್ತು ಅಲ್ಲಿನ ತನಿಖಾ ಸಂಸ್ಥೆಗಳು ಮಾತ್ರ ಪಕ್ಷಗಾರರಾಗಿದ್ದು. ನಮ್ಮ ರಾಜ್ಯ ಸರ್ಕಾರ ಮತ್ತು ನಮ್ಮ ರಾಜ್ಯದ ಈ ಪ್ರಕರಣದ ತನಿಖಾ ಸಂಸ್ಥೆ ಪಕ್ಷಗಾರರಾಗಿರುವುದಿಲ್ಲ.
ಆದಕಾರಣ ನಮ್ಮ ರಾಜ್ಯದಲ್ಲಿ ಜಪ್ತಾದ ಆಸ್ತಿಗಳ ಬಗ್ಗೆ ಸದರಿ ನ್ಯಾಯಾಲಯವು ಯಾವುದೇ ಆದೇಶ ಮಾಡಲಾಗಿಲಿಲ್ಲ ನಮ್ಮ ರಾಜ್ಯದ ಗ್ರಾಹಕರಿಂದ ಸಂಗ್ರಹಿಸಲಾದ ಹಣವನ್ನು ಸಹ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೂಡಿಕೆ ಮಾಡಿ ಅಲ್ಲಿನ ಆಸ್ತಿಗಳನ್ನು ಖರೀದಿ ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಜಪ್ತಾದ ಅಗ್ರಿಗೋಲ್ಡ್ ಸಂಸ್ಥೆಯ ಎಲ್ಲಾ ಆಸ್ತಿಗಳನ್ನು ಒಟ್ಟಾಗಿ ಮಾರಾಟ ಮಾಡಿ ಎಲ್ಲ ಗ್ರಾಹಕರಿಗೂ ತಮ್ಮ ತಮ್ಮ ಠೇವಣಿ ಮೌಲ್ಯದ ಆಧಾರದಲ್ಲಿ ಹಂಚಿಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಗ್ರಗೋಲ್ಡ್ ನಿಂದ ವಂಚನೆಗೊಳಗಾದ ಜನರು ಉಪಸ್ಥಿತರಿದ್ದರು.










