ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಹುಕ್ಕೇರಿ ಶ್ರೀಗಳ ಸಂತಾಪ
- 15 Jan 2024 , 4:58 AM
- Belagavi
- 103
ಬೆಳಗಾವಿ: ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ವಿಧಿವಶ ವಾಗಿರುವುದನ್ನು ಕೇಳಿ ತುಂಬಾ ನೋವಾಯಿತು. ಸಂಸದರಾಗಿ ಸಾಕಷ್ಟು ಕಾರ್ಯವನ್ನು ಮಾಡಿದ ಸುರೇಶ ಅಂಗಡಿಯವರು ಕೇಂದ್ರ ರೈಲ್ವೆ ಸಚಿವರಾದ ಮೇಲಂತೂ ನಿರಂತರವಾಗಿ ಜನರಿಗೆ ಅನೇಕ ಜನಪರ ಕಾರ್ಯವನ್ನು ಮಾಡುವುದರ ಜೊತೆಗೆ ರೈಲ್ವೆ ಇಲಾಖೆ ನೆನೆಗುದಿಗೆ ಬಿದ್ದಿರುವ ಅನೇಕ ಕೆಲಸವನ್ನು ಮಾಡಲಾರಂಭಿಸಿದರು ಅಷ್ಟೇ ಅಲ್ಲದೆ ಹೊಸ ರೈಲ್ವೆ ಗಳನ್ನು ಕೂಡ ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ,

ಇವರು ಸಚಿವರು ಸಂಸದರು ಎನ್ನುವುದಕ್ಕಿಂತ ಹೆಚ್ಚಾಗಿ ಹುಕ್ಕೇರಿ ಹಿರೇಮಠದ ಆಪ್ತ ಶಿಷ್ಯರಾಗಿದ್ದರು. ಬಹುಶಃ ಫೋನ್ ಮಾಡಿದಾಗೆಲ್ಲಾ ಕೆಲಸವಿರಲಿ ಇಲ್ಲದೆರಲಿ ಒಬ್ಬ ಭಕ್ತನಾಗಿ ದರ್ಶನಕ್ಕೆ ಓಡೋಡಿ ಬರುವ ಸಜ್ಜನ ರಾಜಕಾರಣಿ ಸುರೇಶ ಅಂಗಡಿಯವರು ಇವರ ಅಗಲಿಕೆ ನಿಜಕ್ಕೂ ಕೂಡ ಹೆಂತವರನ್ನು ದುಃಖದ ಮಡುವಿನಲ್ಲಿ ಕರೆದುಕೊಂಡು ಹೋಗುತ್ತದೆ. ನಮಗಂತೂ ತುಂಬಾ ನೋವಾಗಿದೆ.

ಇವರ ಕುಟುಂಬವರ್ಗಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಬೇಕು. ಬಹುಶಃ ನನಗೆ ಅನಿಸಿದ ಮಟ್ಟಿಗೆ ಸಚಿವರಾದ ಮೇಲೆ ಅವರು ಇಷ್ಟು ಜನಪರ ಕಾರ್ಯವನ್ನು ಮಾಡಿದ್ದಾರೆ ಅಂತಂದ್ರೆ ಯಾರೇ ಹೊಗಲಿ ಅವರಿಗೆ ಸ್ಪಂದಿಸುವ ಮತ್ತು ಕೆಲಸವನ್ನು ಮಾಡಿಕೊಡುವ ಪ್ರವೃತ್ತಿ ಸುರೇಶ ಅಂಗಡಿರವರಲ್ಲಿ ಇತ್ತು ಹಿಂತ ಅಪರೂಪದ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡು ನಿಜಕ್ಕೂ ತುಂಬಾ ನೋವಾಗ್ತಾಇದೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನಿಯಲಿ ದುಃಖವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೆವೆ.
ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು










