ಸುರೇಶ ಅಂಗಡಿ ಇನ್ನಿಲ್ಲ ಎಂಬುದು ಊಹಿಸಿಕೊಳ್ಳಲು ಸಾಧ್ಯವಿಲ್ಲದಾಗಿದೆ ಕಾರ್ ಚಾಲಕ ಮುದುಕಪ್ಪ
- 26 Dec 2023 , 9:59 AM
- Belagavi
- 187
ಬೆಳಗಾವಿ: ಕೇಂದ್ರ ರಾಜ್ಯ ರೈಲ್ವೇ ಸಚಿವ ಸುರೇಶ ಅಂಗಡಿ ನಿಧನದ ಸುದ್ದಿ ಇಡೀ ರಾಜ್ಯಕಿಯ ವಲಯದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಅದರಲ್ಲಿಯೂ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಲ್ಲಿ ಸುರೇಶ ಅಂಗಡಿ ಇನಿಲ್ಲ ಎಂಬ ಸುದ್ದಿಯನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ.

ಈ ಬಗ್ಗೆ ಸುರೇಶ ಅಂಗಡಿಯವರ ಕಾರು ಚಾಲಕ ಮುದುಕಪ್ಪ ನಾಯಿಕ ಲೋಕಲ ವ್ಯೂವ್ ಜೊತೆ ಮಾತನಾಡಿದ್ದಾರೆ ಸಾಹೇಬರು ನನ್ನನ್ನು ಯಾವತ್ತೂ ಕೆಲಸದವರಂತೆ ನೋಡಿಲ್ಲ. ತಮ್ಮ ಕುಟುಂಬದ ಒರ್ವ ಸದಸ್ಯನಂತೆ, ಮಗನಂತೆ ನನ್ನನು ನೋಡಿ ಕೊಂಡಿದ್ದಾರೆ.

ಕಳೆದ ಗುರುವಾರ ಅಷ್ಟೇ ವಿಮಾನ ನಿಲ್ದಾಣದಲ್ಲಿ ಭೇಟಿ ಆಗಿದ್ದೆ ಈಗ ಕಳೆದ ಎರಡು ದಿನಗಳ ಹಿಂದಷ್ಟೇ ಫೋನಿನಲ್ಲಿ ಮಾತನಾಡಿದ್ದೇ ಆದರೆ ಈಗ ಮಾಧ್ಯಮಗಳಲ್ಲಿ ಸುದ್ದಿ ಕೇಳಿ ನನಗೆ ಮೃತರಾದ ಸುದ್ದಿ ಗೊತ್ತಾಗಿದೆ. ನನಗೆ ಮಾತುಗಳೇ ಬರುತ್ತಿಲ್ಲ ಇದರಿಂದ ಬಹಳ ದುಃಖ ಆಗುತ್ತಿದೆ ಎಂದು ಹೇಳಿದ್ದಾರೆ.










