ಸುರೇಶ ಅಂಗಡಿ ಅವರಿಗೆ ಅಕ್ಷರ ಮೂಲಕ ನಮನ ಸಲ್ಲಿಸಿದ ಗಿರೀಶ್ ಬಡಿಗೇರ

ಬೆಳಗಾವಿ:  ಸುರೇಶ ಅಂಗಡಿ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅಷ್ಟೇ ಯಾಕೆ ಬೆಳಗಾವಿಯ ವಿದ್ಯಾರ್ಥಿ ಮುಖಂಡ ಹಾಗೂ ಅಂಗಡಿ ಇಂಜೀನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಗಿರೀಶ ವಿಠ್ಠಲ ಬಡಿಗೇರ ದಿವಂಗತ ಸುರೇಶ ಅಂಗಡಿಗೆ ನುಡಿ ನಮನ ಸಲ್ಲಿಸಿದ್ದಾರೆ.

promotions

ಮಾನ್ಯ ಸುರೇಶ ಅಂಗಡಿ ಸರ್ ಇವತ್ತು ನಮ್ಮನೆಲ್ಲ ಅಗಲಿದ್ದಾರೆ ಎಂಬುದು ನಂಬಲು ಈಗಲೂ ಅಸಾಧ್ಯ. ಅವರ ಇಂಜೀನಿಯರಿಂಗ್ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡಿದ ನಾನು, ಅವರು ಸದಾ ನಮಗೆ ಹೇಳುತ್ತಿದ್ದರು ನನಗೆ ಬಿಇ ಮಾಡಲು ಆಗಲಿಲ್ಲ, ನಮ್ಮ ಪರಿಸ್ಥಿತಿ ಅಷ್ಟು ಗಂಭೀರವಿತ್ತು. ಆದರೆ ನನ್ನ ಹಾಗೆ ಯಾರೂ ಶಿಕ್ಷಣವಂಚಿತರಾಗಬಾರದು ಆದ್ದರಿಂದ ಈ ಕಾಲೇಜು ಸ್ಥಾಪಿಸಿದ್ದೇನೆ. ಇಲ್ಲಿ ಎಲ್ಲ ವರ್ಗದ ಸಾವಿರಾರು ವಿದ್ಯಾರ್ಥಿಗಳು ಅತ್ಯಂತ ಕಡಿಮೆ ದರದಲ್ಲಿ ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಗಿರೀಶ, ಸರಿಯಾಗಿ ಓದೋ ಎಂದು ನನ್ನನ್ನು ಯಾವಾಗಲೂ ಬೈಯುತ್ತಿದ್ದರು, ಶಿಕ್ಷಣ ಮನುಷ್ಯನಿಗೆ ಅತ್ಯಂತ ಮುಖ್ಯ. ಅದೊಂದು ಇದ್ದರೆ ನಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಬುದ್ದಿ ಹೇಳುತ್ತಿದ್ದರು. ಹೀಗೆ ಶಿಕ್ಷಣ ಕುರಿತಂತೆ ಸಾಹೇಬರಿಗೆ ವಿಶೇಷ ಕಾಳಜಿ ಇತ್ತು. ಏನ ಆದರೂ ನಮ್ಮ ಸಾಹೇಬರು ಇದಾರೆ ತಡಿ ಎಂದು ನೊಂದವರನ್ನು ಹುರಿದುಂಬಿಸಿ, ಆತ್ಮಸ್ಥೈರ್ಯ ತುಂಬುತ್ತಿದ್ದೆ ಆದರೆ ಇವತ್ತು ಅವರು ನಮ್ಮನ್ನು ಅನಾಥರಾಗಿ ಮಾಡಿ ಹೋಗಿದ್ದಾರೆ. ಎಂದು ತನ್ನ ನೆಚ್ಚಿನ ಗುರುಗಳಾದ ಸುರೇಶ ಅಂಗಡಿ ಅವರಿಗೆ ಅಕ್ಷರ ಮೂಲಕ ನಮನ ಸಲ್ಲಿಸಿದ್ದಾರೆ ಗಿರೀಶ ಬಡಿಗೇರ.

promotions

Read More Articles