ಪೌರಕಾರ್ಮಿಕರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕಿದೆ; ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ

  • 15 Jan 2024 , 12:17 AM
  • Haveri
  • 197

ಬ್ಯಾಡಗಿ: ಪೌರಕಾರ್ಮಿಕರ ದಿನಾಚಾರಣೆ ನಿಮಿತ್ಯ ಪಟ್ಟಣದಲ್ಲಿಂದು ಮ್ಯಾನುವಲ್ ಸ್ಕಾವೆಂಜರ್ಸ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಪೌರಕಾರ್ಮಿಕರು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸರ್ಕಾರ ಪ್ರತಿದಿನ ಬೆಳಗಿನ ಉಪಹಾರ, ಸಮವಸ್ತç, ಗುಣಮಟ್ಟದ ಮಾಸ್ಕ, ಹ್ಯಾಂಡಗ್ಲೌಸ್ ಹಾಗೂ ಆಗಾಗ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಪೌರ ಕಾರ್ಮಿಕರು 6 ತಿಂಗಳಿಗೊಮ್ಮೆ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ವಂತ ನಿವೇಶನ ಹೊಂದಿದ ಪೌರಕಾರ್ಮಿಕರ ಗೃಹ ಭಾಗ್ಯಯೋಜನೆಯಡಿಯಲ್ಲಿ 7.5 ಲ.ರೂ ಸಹಾಯಧನ ನೀಡುವ ಮೂಲಕ ಹತ್ತಾರು ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ಈಗ ಶೌಚಗೃಹಗಳಿಗೆ ಒಳಚರಂಡಿ ಯೋಜನೆಯ ಪೈಪುಗಳನ್ನು ಜೋಡಿಸಿದ್ದು, ಕಾರ್ಮಿಕರು ಗುಂಡಿಯಲ್ಲಿ ಇಳಿದು ಸ್ವಚ್ಛಗೊಳಿಸಲು ತೆರಳಬಾರದು.

promotions

ಸಕ್ಕಿಂಗ್ ಮಿಷನ್ ಯಂತ್ರದ ಮೂಲಕ ಸ್ವಚ್ಚಗೊಳಿಸಬೇಕೆಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ ಪೌರಕಾರ್ಮಿಕರು ಕೆಲಸದೊಂದಿಗೆ ತಮ್ಮ ವೈಯಕ್ತಿಕ ಜೀವನಕ್ಕೂ ವೇಳೆ ನೀಡಬೇಕು ತಮ್ಮ ಮಕ್ಕಳ ಶಿಕ್ಷಣದ ಕಡೆ ಗಮನಹರಿಸಿ ಅವರನ್ನು ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಸರ್ಕಾರ ಪೌರಕಾರ್ಮಿಕರ ಏಳ್ಗೆಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಈ ಹಿಂದೆ ಮೂರು ಬಾರಿ ಅತ್ಯುತ್ತಮ ಪುರಸಭೆ ಪ್ರಶಸ್ತಿ ಪುರಸ್ಕೃತವಾಗಿದ್ದು ಜಿಲ್ಲೆಯಲ್ಲಿ ಬ್ಯಾಡಗಿ ಪುರಸಭೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪೌರಕಾರ್ಮಿಕರರು ಸ್ವಚ್ಚತೆಗೆ ಹೆಚ್ಚು ಗಮನಹರಿಸುತ್ತಿದ್ದು, ಮನೆಮನೆ ಕಸ ತರುವ ಅವರ ಕಾರ್ಯ ಯಶಸ್ವಿಯಾಗಿದೆ. ಹೊರವಲಯದಲ್ಲಿ ಘನತ್ರಾö್ಯಜ್ಯ ಘಟಕದಲ್ಲಿ ಹಸಿಕಸ, ಒಣಕಸ ಹಾಗೂ ಪ್ಲಾಷ್ಟಿಕ ಬೇರ್ಪಡಿಸುವ ಕಾರ್ಯವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾಗರಾಜ ಚಿಕ್ಕಣ್ಣನವರ, ಮಹಾಂತೇಶ ಹಳ್ಳಿ, ನಾಗರಾಜ ದ್ಯಾಮಪ್ಪನವರ, ಉಜ್ಜಂಗೆಮ್ಮ ಗುಡಗೂರು, ನಾಗರಾಜ ನಿಂಗಮ್ಮನವರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ವಿನಯಕುಮಾರ ಹಿರೇಮಠ, ಸುಭಾಸ ಮಾಳಗಿ, ಪಕೀರಮ್ಮ ಚಲವಾದಿ, ಸಂಜೀವ ಮಡಿವಾಳರ, ಮಂಜುನಾಥ ಬಣಕಾರ, ಗಿರಿಜಾ ಪಟ್ಟಣಶೆಟ್ಟಿ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪುಂಡಲೀಕ ಮಾನನವರ ಇತರರು ಉಪಸ್ಥಿತರಿದ್ದರು.

promotions

Read More Articles