ಕೇಂದ್ರ ಸಚಿವ ಸುರೇಶ ಅಂಗಡಿ ನಿಧನಕ್ಕೆ ಮಾಜಿ ಶಾಸಕ ಎಮ್.ಎಲ್.ಮುತ್ತೆನ್ನವರ ಕಂಬನಿ

ಯಮಕನಮರಡಿ : ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಗೋಕಾಕದ ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ ಕಂಬನಿ ಮಿಡಿದಿದ್ದಾರೆ. 2001 ರಿಂದಲೂ ಭಾರತೀಯ ಜನತಾ ಪಕ್ಷವನ್ನು ಬೆಳಗಾವಿ ಜಿಲ್ಲೆಯ ಮೂಲೆ-ಮೂಲೆಗೂ ಒಯ್ದು ಸಂಘಟಿಸಿದ್ದ ಸುರೇಶ ಅಂಗಡಿಯವರು ಜಿಲ್ಲೆಯ ಅಭಿವೃದ್ದಿಗೆ ವಿಶೇಷ ಪ್ರಯತ್ನ ಮಾಡಿದ್ದರು. ಶೇಡಬಾಳ-ಬೆಂಗಳೂರು ನಡುವೆ ನೂತನ ರೈಲಿನ ಸಂಚಾರ ಆರಂಭಿಸಿದ್ದ ಅವರು, ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗದ ಕನಸನ್ನು ಕಂಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಮನೋಭಾವದವರಾಗಿದ್ದ ಅವರು ಜಿಲ್ಲೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕೆಂಬ ಹಂಬಲವನ್ನು ಹೊಂದಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲೇಂದು ಮಾಜಿ ಶಾಸಕ ಎಂ.ಎಲ್. ಮುತ್ತೆನ್ನವರ ಪ್ರಾರ್ಥಿಸಿದ್ದಾರೆ.

promotions

promotions

Read More Articles