ಕೊರೋನಾ ಸಂಕಷದ್ಟ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರ ದಕ್ಷತೆಯ ಕಾರ್ಯ; ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ

ಶಿಗ್ಗಾಂವಿ: ಪೌರ ಕಾರ್ಮಿಕರು ಕೊರೋನಾ ಸಾಂಕ್ರಾಮಿಕ ಕಾಯಿಲೆಯ ಸಂಕಷ್ಟ ಪರಿಸ್ಥಿತಿಯಲ್ಲೂ ದಕ್ಷತೆಯಿಂದ ಕೆಲಸ ಮಾಡಿ ಸಮೂದಾಯದ ಸ್ವಚ್ಛತೆ ಮಾಡುವ ಮೂಲಕ ಸಾಕಷ್ಟು ಸವಾಲುಗಳನ್ನೂ ಎದುರಿಸಿ, ಕರ್ತವ್ಯ ಪಾಲನೆಯಲ್ಲಿ ಇಲಾಖೆಗೆ ಮೆರಗು ನೀಡಿದ್ದಾರೆ ಎಂದು ಸವಣೂರು ಕಂದಾಯ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು. ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಪೌರ ಕಾರ್ಮಿಕರು ಉತ್ತಮ ಆರೋಗ್ಯವಂತರಾಗಿ ವಯಕ್ತಿಕ ಬದುಕು ಕಟ್ಟಿಕೊಳ್ಳಬೇಕು. ಅಲ್ಲದೇ ಅರ್ಥಿಕ ತೊಂದರೆಗೆ ಸಿಲುಕುವಂತಾಗಬಾರದು, ಮಕ್ಕಳಿಗೆ ಒಳ್ಳೇಯ ಶಿಕ್ಷಣವಲ್ಲಿ ಹೆಚ್ಚು ಒತ್ತು ನೀಡಬೇಕೆಂದ ಅವರು ದುರಾಭ್ಯಾಸ ಹವ್ಯಾಸಗಳಿದ್ದಲ್ಲಿ ಅವುಗಳನ್ನು ದೂರಮಾಡಿಕೊಳ್ಳಿ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷತೆ ಬೇಡ. ಸ್ವಚ್ಛತಾ ಕಾರ್ಯದ ಮೂಲಕ ಸಮೂದಾಯವನ್ನು ಆರೋಗ್ಯವಂತವಾಗಿಡುವ ನೀವು, ವಯಕ್ತಿಕ ಸ್ವಚ್ಛತೆ, ಆರೋಗ್ಯದ ಕಡೆಗೆ ನಿಮ್ಮ ಕಾಳಜಿ ಕಾಣುತ್ತಿಲ್ಲ.

promotions

ದುರಬ್ಯಾಸಗಳನ್ನು ಬಿಟ್ಟು ಮಕ್ಕಳ ಉತ್ತಮ ಶಿಕ್ಷಣಕ್ಕೆ ಆಧ್ಯತೆ ನೀಡಿ, ಪೌರಕಾರ್ಮಿಕರು ಅಭಿನಂಧನೆಗೆ ಅರ್ಹರು ಎಂದ ಅವರು ಕೆಲಸಕ್ಕೆ ಸಮಾನವಾಗಿ ಅವರ ಭತ್ತೆ, ವೇತನವನ್ನು ನಿಲುಗಡೆ ಮಾಡದೇ, ನಿಗಧಿತ ಸಮಯದೊಳಗೆ ಪಾವತಿಸುತ್ತಿದ್ದೆವೆ ಎಂದರು. ಸಾನಿಧ್ಯವಹಿಸಿ ಮಾತನಾಡಿದ ವಿರಕ್ತಮಠದ ಸಂಗನಬಸವಶ್ರೀಗಳು, ಶರಣರ ತತ್ವಧರ್ಮ ಕಾಯಕದಿಂದ ಕಾಣುವಂತಾಗಿದೆ. ಶೃಮಿಕರ ಕಾಯಕ ಶುದ್ಧಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣಮುದಕಮ್ಮನವರ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಧನದ ಚೆಕ್ ವಿತರಿಸಿದರು. ಸಮೂದಾಯ ಸಂಘಟಕ ಅಧಿಕಾರಿ ಶೈಲಾಜಾ ಪಾಟೀಲ ಪ್ರಾರ್ಥಿಸಿದರು. ಮುಖ್ಯಾಧಿಕಾರಿ ಎಂ.ವಿ. ಹಿರೇಮಠ ಪ್ರಾಸ್ಥಾವಿಕ ಮಾತನಾಡಿದರು. ತಹಶೀಲ್ದಾರ ಪ್ರಕಾಶ ಕುದುರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ಚಿಕ್ಕಮಠ. ವೇಧಿಕೆಯಲ್ಲಿದ್ದರು. ಕಂದಾಯ ಅಧಿಕಾರಿ, ಮಾಲತೇಶ ತಿಗಳಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪುರಸಭೆಯ ಸದಸ್ಯರು ಶಿಬ್ಬಂಧಿಗಳು ಉಪಸ್ಥಿತಿತರಿದ್ದರು.

promotions

Read More Articles