ಸುರೇಶ ಅಂಗಡಿ ಸಾವು ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ: ಎಂ.ಜಿ.ಹಿರೇಮಠ

ಬೆಳಗಾವಿ: ಕೇಂದ್ರ ಸಚಿವ ಸುರೇಶ ಅಂಗಡಿ ಅವರು ನನಗೆ 2003 ರಿಂದ ಪರಿಚಯ ನಮ್ಮೂರು ಅವರೂರು ಅಕ್ಕಪಕ್ಕ. ಬಹಳಷ್ಟು ಸೌಜನ್ಯ ವ್ಯಕ್ತಿ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದು ಡಿಸಿ ಎಂ.ಜಿ.ಹಿರೇಮಠ ಹೇಳಿದರು. ಶುಕ್ರವಾರ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾದ್ಯಮದವರೊಂದಿಗೆ ಮಾತನಾಡಿದರು.

promotions

ನಾನು ಗದಗ ಡಿಸಿಯಾದಾಗ ನೆರೆ ಬಂದ ಸಂದರ್ಭದಲ್ಲಿ ಸಾವಿರು ಸಂಖ್ಯೆಯಲ್ಲಿ ಜನರು ಸಿಲುಕಿಕೊಂಡಿದ್ದರು ಅವರನ್ನು ನೀರಿನ ಬದುಕಿಸಲು ಕಷ್ಟವಾಗಿತ್ತು. ಅಲ್ಲಿಂದ ಸಾಗಿಸಲು ವಾಹನ ಇರಲಿಲ್ಲ. ಆದ್ದರಿಂದ ರೈಲ್ಬೆ ಬಿಡುವಂತೆ ಕೇಂದ್ರ ಸಚಿವರಿಗೆ ಮನವಿ‌ ಮಾಡಿದ್ದೇವು. ಎರಡು ‌ಗಂಟೆಯಲ್ಲಿ ರೈಲ್ವೆ ಬಿಟ್ಟರು ಎಂದು ನೆನಪಿಸಿಕೊಂಡರು.

promotions

ಕೊರೋನಾ ಸಂಕಷ್ಟದ ನಡುವೆಯೂ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅದು ಕಂಡಿಲ್ಲ. ಜತೆಗೆ ಬೆಳಗಾವಿಯಲ್ಲಿ ಸ್ಮಾಟ್೯ಸಿಟಿ ಸಭೆ , ರೈಲ್ವೆ ಇಲಾಖೆಯ ಸಂಬಂಧಿಸಿದ ಸಭೆ ನಡೆಸಿ ಜನರ ಜನರ ಪ್ರೀತಿಗೆ ಕಾರಣರಾಗಿದ್ದರು. ಅವರ ಅಗಲಿಕೆಯಿಂದ ಸಾಕಷ್ಟು ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು

Read More Articles