ನಡುರಸ್ತೆಯಲ್ಲೇ ಇಬ್ಬರು ಯುವತಿಯರ ಬರ್ಬರ ಹತ್ಯೆ ಬೆಚ್ಚಿ ಬಿದ್ದ ಬೆಳಗಾವಿ ಜನತೆ..!

ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದ ಹೊರ ವಲಯದಲ್ಲಿ 21 ವರ್ಷದ ಇಬ್ಬರು ವಿವಾಹಿತ ಮಹಿಳೆಯರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಧಾರುಣ ಘಟನೆ ಇಂದು ಸಂಜೆ 4 ರಿಂದ 5 ಘಂಟೆಯ ಸಮಯದಲ್ಲಿ ನಡೆದಿದೆ. ರಾಜಶ್ರೀ ರವಿ ಬನ್ನೂರ (21) ಮತ್ತು ರೋಹಿಣಿ ಗಂಗಪ್ಪಾ ಹುಮನಿ (21) ಕೊಲೆಯಾದ ದುರ್ದೈವಿಗಳು. ಇಬ್ಬರು ವಿವಾಹಿತರಾಗಿದ್ದು ಸಿಂಧೋಳಿ ಗ್ರಾಮದ ರಾಜಶ್ರೀ ಎಂಬುವಳು ಒಂದೂವರೆ ವರ್ಷದ ಹಿಂದೆ ಕಾಳೆನಟ್ಟಿ ಗ್ರಾಮದ ರವಿ ಜೊತೆ ಹಾಗೂ ಸುಳಗಾ ಗ್ರಾಮದ ರೋಹಿಣಿ ಒಂದು ವರ್ಷದ ಹಿಂದೆ ಅದೆ ಗ್ರಾಮದ ಗಂಗಪ್ಪಾ ಜೊತೆ ಮದುವೆ ಆಗಿತ್ತು. ಈ ಇಬ್ಬರು ವಿವಾಹಿತ ಮಹಿಳೆರಯನ್ನು ನಡು ರಸ್ತೆಯಲ್ಲೇ ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜೋಡಿ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕೊಲೆ ಪ್ರಕರಣದಿಂದ ಕಾಳೆನಟ್ಟಿ, ಮಚ್ಚೆ , ಸಿಂಧೂಳಿ ಹಾಗೂ ಸುಳಗಾ ಗ್ರಾಮದ ಜನರನಲ್ಲಿ ಆತಂಕ ಹೆಚ್ಚಿಸಿದ್ದು, ಕೊಲೆ ಆರೋಪಿಗಳು ಸಿಕ್ಕಾಗ ಮಾತ್ರ ಕೊಲೆಯ ರಹಸ್ಯ ಬಯಲಾಗಲಿದೆ.

promotions

promotions

Read More Articles