ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಸಭೆ

ಹುಕ್ಕೇರಿ: ಗಾನ ಗಂಧರ್ವ, ಸಂಗೀತ ಮಾಂತ್ರಿಕ, ಸಾವಿರ ಹಾಡುಗಳ ಸರದಾರ ದಿ. ಎಸ್.ಪಿ. ಬಾಲಸುಬ್ರಮಣ್ಯಮ್ ಹಾಗೂ ಬೆಳಗಾವಿ ಸಂಸದ, ಕೇಂದ್ರ ರೇಲ್ವೆ ರಾಜ್ಯ ಸಚಿವ ದಿ.ಸುರೇಶ ಅಂಗಡಿಯವರಿಗೆ ಭಾವ ಪೂರ್ಣ ಶೃದ್ಧಾಂಜಲಿಯನ್ನು ಹಿಡಕಲ್ ಡ್ಯಾಮಿನ ಮಹಿಳಾ ಕಲ್ಯಾಣ ಸಂಸ್ಥೆಯ ಕುಟೀರದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರಯ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಉದಯಕುಮಾರ ಕಮ್ಮಾರ ಸಂಗೀತ ಲೋಕದಲ್ಲಿ ದೇವರೆನಿಸಿಕೊಂಡು ಇಡಿ ದೇಶದಲ್ಲಿ ಸಂಗೀತ ದಿಗ್ಗಜ ಆಗಿದ್ದಾರೆ ಎಂದು ಎಸ್.ಪಿ. ಬಾಲಸುಬ್ರಮಣ್ಯಮ್ ರವನ್ನು ಸ್ಮರಿಸಿದರು.

promotions

ಹುಕ್ಕೇರಿ ತಾಲೂಕಾ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ ರಾಜ್ಯ ಹಾಗೂ ದೇಶದಲ್ಲಿ ಕಿಲ್ಲರ್ ಕೋರೊನಾ ರಣಕೇಕೆ ಹಾಕುತಿದೆ. ಈ ಮಹಾಮಾರಿಗೆ ಗಣ್ಯಾತಿ ಗಣ್ಯರು, ಸಾಮಾನ್ಯ ಜನರು ಬಲಿಯಾಗುತ್ತಿದ್ದು ವಿಷಾದನೀಯ ವ್ಯಕ್ತಪಡಿಸಿದರು. ಹಾಡುಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ, ಸಂಗೀತ ಲೋಕದ ದಿಗ್ಗಜ, ಗಾನ ಗಂಧರ್ವ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಮಣ್ಯಮ್ ರವರ ನಿಧನ ಅತ್ಯಂತ ದುಃಖದ ಸಂಗತಿಯಾಗಿದೆ. ಇವರು ಇಡಿ ಜಗತ್ತಿನಲ್ಲಿಯೆ ಸಂಗೀತದಲ್ಲಿ ಸಾಧನೆ ಮಾಡಿದ ಮಹಾನ ವ್ಯಕ್ತಿಯಾಗಿದ್ದರೆಂದು ಬಣ್ಣಿಸಿದರು. ಅದೇ ರೀತಿ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ, ಶಿಕ್ಷಕರಾದ ಎಸ್ ಆಯ್ ನದಾಫ, ಹಿರಿಯ ಆರೋಗ್ಯ ಸಹಾಯಕರಾದ ಮಹಾದೇವಿ ಹಳಿಜೋಳ ಹಾಗೂ ಬಸವ ಕಲ್ಯಾಣ ಶಾಸಕರಾದ ನಾರಾಯಣರಾವ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು. ಸಾಹಿತಿ ಎಸ್.ಎಮ್.ಶಿರೂರ ಮಾತನಾಡಿ ಕೊರೊನಾದಿಂದ ನಮ್ಮ ದೇಶ ನಲುಗುತ್ತಿದೆ. ಸಾಮಾನ್ಯ, ಅಸಮಾನ್ಯ ಜನರು ಬಲಿಯಾಗುತ್ತಿದ್ದು ದುರ್ದೈವದ ಸಂಗತಿಯಾಗಿದೆ. ಜನರು ಕೊರೊನಾ ಹೆಮ್ಮಾರಿಯನ್ನು ಧೈರ್ಯದಿಂದ ಹೊಡೆದು ಹಾಕಬೇಕಿದೆ ಎಂದು ಕಿವಿಮಾತು ಹೇಳಿದರು. ನಿಧನ ಹೊಂದಿದ ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.

promotions

ಈ ಸಂದರ್ಭದಲ್ಲಿ ಹಿಡಕಲ್ ಡ್ಯಾಮನ ಸಿ.ಆರ್.ಪಿ ರಾಜಗೋಪಾಲ ಮಿತ್ರನ್ನವರ, ಶಿವಾನಂದ ಬಡಿಗೇರ, ಮಹಾವೀರ ತೆಳಗಡಿ, ಶಿವಾನಂದ ನಾವಿ, ಬಂಡೆಪ್ಪಾ ಮಾದರ, ಮಹಾಂತೇಶ ಹೊಸಮನಿ, ಬಸವರಾಜ ಹರಿಜನ, ಪತ್ರಕರ್ತರಾದ ರಮೇಶ ನಾಯಿಕ, ಎ.ಎಮ.ಕರ್ನಾಚಿ, ದೀಪಕ ನಾಡಗೌಡರ, ಮಹಿಳಾ ಕಲ್ಯಾಣ ಸಂಸ್ಥೆಯ ಅಧೀಕ್ಷಕಿ ರಾಧಾ ಬಡಿಗೇರ ಸೇರಿದಂತೆ ಇತರರು ಭಾಗವಹಿಸಿ ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಅರ್ಪಿಸಿ, ಮೌನಾಚರಣೆ ಮಾಡಲಾಯಿತು. 

Read More Articles