ಅಜಾಗರೂಕತೆಯಿಂದ ಮಾಸ್ಕ ಧರಿಸದೆ ಓಡಾಡುವದು, ಹಾಗೂ ನಿರ್ಲಕ್ಷತೆ ಕೂಡಾ ಈ ಕೊರೋನಾ ಹರಡಲು ಕಾರಣವಾಗಿದೆ; ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ
- 15 Jan 2024 , 3:22 AM
- Haveri
- 114
ಶಿಗ್ಗಾಂವ: ತಾಲೂಕಿನ ಗೊಟಗೋಡಿ ಗ್ರಾಮದಲ್ಲಿನ ಉತ್ಸವ ರಾಕ್ ಗಾರ್ಡನ್‌ನ ಜಾನಪದ ರಂಗಮAದಿರದಲ್ಲಿ ಭಾನುವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ ಪ್ರವಾಸೋದ್ಯಮ ಆರಂಭಿಸಲು ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚನೆಯಂತೆ ಇಂದು ಅನುಮತಿ ನೀಡಲಾಗಿದೆ. ಅವರು ಕೋವಿಡ್-2019 ಮಹಾಮಾರಿ ರೋಗದಿಂದ ವಿಶ್ವವೇ ತತ್ತರಿಸಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ದೇಶದ ಜನತೆಯ ಸುರಕ್ಷತೆಗಾಗಿ ಕೇಂದ್ರ ಸರಕಾರ ಲಾಕ್ ಡೌನ್ ಪದ್ಧತಿ ಅನುಸರಿಸಿದ್ದರಿಂದ ದೇಶದಲ್ಲಿನ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಎಲ್ಲ ಮನೋರಂಜನಾ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಆದರೆ ಮತ್ತೇ ಕೇಂದ್ರ ಮತ್ತು ರಾಜ್ಯ ಸರಕಾರ ವಿಶ್ವ ಪ್ರವಾಸೋದ್ಯಮ ದಿನದಿಂದ ಪುನರಾರಂಭಿಸಲು ಅನುಮತಿ ನೀಡಲಾಗಿದೆ.

ಈ ಸಮಯದಲ್ಲಿ ಜನರ ಅಜಾಗರೂಕತೆ ಮಾಸ್ಕ ಧರಿಸದೆ ಓಡಾಡುವದು, ಹಾಗೂ ನಿರ್ಲಕ್ಷತೆ ಕೂಡಾ ಈ ಕೊರೋನಾ ಹರಡಲು ಕಾರಣವಾಗಿದೆ, ಈ ಕಾಯಿಲೆಗೆ ಔಷದ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕು ಎಂದು ಸಲಹೆ ನೀಡಿದ ಅವರು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ಪ್ರವಾಸೋದ್ಯಮ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವುದರೊಂದಿಗೆ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ ಎಂದರು. ವಿಶ್ವ ಪ್ರವಾಸೋದ್ಯಮ ದಿನ-2020ರ ಸಂದೇಶ ‘ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ಧಿ’ ಕುರಿತು ಉತ್ಸವ ರಾಕ್ ಗಾರ್ಡನ್ ಸಮಿತಿ ಆಧ್ಯಕ್ಷೆ ವೇದಾರಾಣಿ ದಾಸನೂರ ಮಾತನಾಡಿ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಕೊರೋನಾ ಕರಿ ಕೊರೋನಾ ಛಾಯೆ ಆವರಿಸಿದ್ದರೂ ಎದೆಗುಂದದೆ ಅವುಗಳ ಅಭಿವೃದ್ಧಿಗೆ ಮತ್ತೆ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು. ಜಿ.ಪಂ.ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾಇ ಯೋಗೀಶ್ವರ, ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಟಿ.ಬಿ.ಸೊಲಬಕ್ಕನವರ ಅವರು ಮಾತನಾಡಿ, ಪ್ರವಾಸದ್ಯೋಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು ಆಸಕ್ತರು ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.











