ಕೋರೊನಾ ಆತಂಕದ ಮಧ್ಯೆ ವರುಣನ ಅವಾಂತರ

ಬೆಳಗಾವಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಹಗಲು-ರಾತ್ರಿಯನ್ನದೇ ಸುರಿಯುತ್ತಿದ್ದು ಅದರಲ್ಲೂ ಕೋರೊನಾ ಆತಂಕದ ಮದ್ಯ ವರುಣನ ಆರ್ಭಟ ಜೋರಾಗಿಯೆ ಇದೆ. ಈ ಬಾರಿ ಕೊರೊನಾ ಮಹಾಮಾರಿ ಜನರನ್ನು ಮನೆಯಿಂದ ಹೊರಗೆ ಕಾಲಿಡದಂತೆ ಮಾಡಿದೆ. ಇಡೀ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ವೈರಸ್‌ಗೆ ಜನರು ತತ್ತರಿಸಿ ಹೋಗಿದ್ದಾರೆ .

ಒಂದು ವಾರದಿಂದ ಹಗಲು ರಾತ್ರಿಯನ್ನದೆ ಸುರಿಯುತ್ತೀರುವ ಮಳೆಯಿಂದಾಗಿ ನಗರ ಸೇರಿದಂತೆ ಬೈಲಹೊಂಗಲ, ಕಿತ್ತೂರು, ಹಿರೇಬಾಗೇವಾಡಿ,ಹುಕ್ಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಇದರಿಂದ ಹಲವು ಗ್ರಾಮೀಣ ಪ್ರದೇಶಗಳಲ್ಲಿ (ವಿದ್ಯುತ್) ಕರೆಂಟ್ ಕಟ್ ಆಗಿವೆ.

ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ದಿನೆ ದಿನೆ ಮಳೆಯ ಅಬ್ಬರ ಜೋರಾಗಿಯೆ ಇದೆ ಜನಸಾಮಾನ್ಯರಿಗೆ ತೊಂದರೆಯ ಜೋತೆಗೆ ಆತಂಕ ಸಹ ಮೂಡಿದೆ ಒಂದೆಡೆ ಕೊರೊನಾ ಆತಂಕ, ಮತ್ತೊಂದೆಡೆ ಮಳೆ ಭಯವೂ ಎದುರಾಗಿದೆ. ನಗರದ ಹೊರವಲಯದಲ್ಲಿ ನಿನ್ನೆ ಭೂತರಾಮನಹಟ್ಟಿ ಹತ್ತಿರ ಧಾರಾಕಾರ ಮಳೆಯಿಂದ NH4 ಹೈವೇ ಮಳೆಯಿಂದ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವಂತೆ ಯಾಗಿತ್ತು. ಅದರಲ್ಲೂ ರೈತರಿಗೆ ಬೆಳೆ ಹಾಳಾಗುತ್ತದೆ ಎಂಬ ಆತಂಕ ಕೂಡ ಶುರುವಾಗಿದೆ.

promotions

Read More Articles