ರಾಜ್ಯರೈತ ಸಂಘ ಸೇರಿ ವಿವಿಧ ಸಂಘಟನೆಗಳ ಪ್ರತಿಭಟನೆ
- 15 Jan 2024 , 1:08 AM
- Haveri
- 104
ರಾಣೇಬೆನ್ನೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು,ರೈತರು, ವಿವಿಧಕನ್ನಡಪರ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಕೆಇಬಿ ಗಣೇಶದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು ಪಿ.ಬಿ. ರಸ್ತೆ ಮೂಲಕ ಬಸ್ ನಿಲ್ದಾಣ ವೃತ್ತ, ಕೋರ್ಟ್ ವೃತ್ತ, ಪೆÇೀಸ್ಟ್ ವೃತ್ತ ಪ್ರತಿಭಟನೆ ನಡೆಸಿದ್ದಾರೆ.ಇನ್ನೂಂದುಕಡೆ ಸಿದ್ದೇಶ್ವರ ದೇವಸ್ಥಾನದಿಂದ ಕೆಲವು ಸಂಘಟನೆಗಳುಸೇರಿ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕುಎಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಬಸನಗೌಡ ಕೋಟೂರು ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ವೀಂದ್ರಗೌಡ ಪಾಟೀಲ ಮಾತನಾಡಿ, ಭೂ ಸುಧಾರಣೆಕಾಯ್ದೆಯಿಂದರೈತರ ಜಮೀನುಗಳು ಕಾರ್ಖಾನೆ, ರಿಯಲ್‍ಎಸ್ಟೇಟ್ ಸೇರಿಇತರಉದ್ಯಮೆದಾರರ ಪಾಲಾಗಲಿವೆ. ಕೃಷಿ ಜಮೀನುಗಳನ್ನು ರೈತರ ಬದಲು ಖಾಸಗಿ ವ್ಯಕ್ತಿಗಳೇ ಖರೀದಿಸುವವರು ಹೆಚ್ಚಾಗಲಿದ್ದಾರೆ. ಇದರಿಂದ ಮುಂದಿನ ದಿನದಲ್ಲಿ ಕೃಷಿ ಭೂಮಿಕಿಂಚಿತ್ತೂ ಉಳಿಯದ ಪರಿಸ್ಥಿತಿ ನಿರ್ಮಾಣವಾಗಲಿದೆ.ಆದ್ದರಿಂದ ಭೂ ಸುಧಾರಣೆಕಾಯ್ದೆಗೆತಂದಿರುವತಿದ್ದುಪಡಿ ಕೈ ಬಿಡಬೇಕುಎಂದು ಆಗ್ರಹಿಸಿದರು. ಹನುಮಂತಪ್ಪಕಬ್ಬಾರ ಮಾತನಾಡಿ, ಕೇಂದ್ರ ಸರಕಾರವು ಸುಗ್ರೀವಾಜ್ಞೆಗಳ ಮೂಲಕ ಭೂ ಸುಧಾರಣಾಕಾಯ್ದೆ. ಎಪಿಎಂಸಿ. ಕಾಯ್ದೆ, ವಿದ್ಯುತ್‍ತಿದ್ದುಪಡಿಕಾಯ್ದೆಗಳನ್ನು ಜಾರಿಗೆತಂದುರೈತರಿಗೆ ಮರಣ ಶಾಸನ ಬರೆಯಲು ಯತ್ನಿಸಿದೆ. ಎಪಿಎಂಸಿ ಕಾಯ್ದೆಯಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿ ಹಮಾಲರು, ವ್ಯಾಪಾರಸ್ಥರು ಬೀದಿ ಬರುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರತಿದ್ದುಪಡಿಕಾಯ್ದೆಯನ್ನು ಹಿಂಪಡೆಯಬೇಕುಎಂದರು. ಪ್ರಮುಖರಾದಚಂದ್ರಣ್ಣ ಬೇಡರ, ಪುಟ್ಟಪ್ಪ ಮರಿಯಮ್ಮನವರ, ಶಂಕ್ರಣ್ಣ ಮೆಣಸಿನಹಾಳ, ರವೀಂದ್ರಗೌಡ ಪಾಟೀಲ, ಎಸ್.ಡಿ. ಹಿರೇಮಠ, ಸುರೇಶಪ್ಪಗರಡಿಮನಿ, ದಿಳ್ಳೆಪ್ಪ ಸತ್ಯಪ್ಪನವರ ಹಾಗೂ ಕರ್ನಾಟಕರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರುಭಾಗವಹಿಸಿದ್ದರು.












