ಶಾಸಕರ ವರ್ತನೆಗೆ ಖಂಡನೆ, ಪ್ರಜಾಪ್ರಭುತ್ವದ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದ ನಿಂಗರಾಜ ಕೋಡಿಹಳ್ಳಿ

  • 14 Jan 2024 , 11:04 PM
  • Haveri
  • 185

ರಾಣೇಬೆನ್ನೂರು: ಪಟ್ಟಣದ ನಗರಸಭೆ ಕಚೇರಿ ಎದುರು ನಿರಂತರ ಕುಡಿವ ನೀರು ಪೂರೈಸುವ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಕ್ಷೇತ್ರದ ಈ ಹಿಂದಿನ ಶಾಸಕರಾದ ದಿ.ಶಿವಣ್ಣ ಹಾಗೂ ಕೋಳಿವಾಡ ತಾಲೂಕಿನಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ, ಜನರಿಗೆ ಉತ್ತಮವಾದ ಯೋಜನೆಗಳನ್ನು ನೀಡಿದ್ದಾರೆ. ಆದರೆ ಹಾಲಿ ಶಾಸಕರು ಕಳಪೆ ಕಾಮಗಾರಿಯನ್ನು ಬೆಂಬಲಿಸುತ್ತಿದ್ದರೆ ಇದು ಸರಿಯಲ್ಲ ಎಂದರು ನಿರಂತರ ಕುಡಿವ ನೀರು ಪೂರೈಸುವ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಆದರೇ ಶಾಸಕರು ಡಿ.25ಕ್ಕೆ ನೀರು ಪೂರೈಸಲಾಗುವುದು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನೀತಿಯಾಗಿದೆ, ಕಳಪೆ ಕಾಮಗಾರಿ ಎಂದು ನಾನು ಸಾಬೀತುಪಡಿಸುತ್ತೇನೆ. ಅವರು ರಾಜೀನಾಮೆ ನೀಡಲಿ. ಅವರು ಕಳಪೆ ಕಾಮಗಾರಿಯಾಗಿಲ್ಲ ಎಂದು ಸಾಬೀತುಪಡಿಸಿದರೆ ನಾನು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾದ ರಾಣೇಬೆನ್ನೂರಿಗೆ ಮೂಲಭೂತ ಸೌಕರ್ಯಗಳ ಅವಶ್ಯವಾಗಿದೆ. ಆದರೆ ದೂರದೃಷ್ಟಿಯಿಲ್ಲದ ಯೋಜನೆಗಳಿಂದ ಜನರಿಗೆ ಸಮಸ್ಯೆಯಾಗುವ ಜತೆಗೆ ಸರ್ಕಾರಕ್ಕೆ ಹೊರಯಾಗುತ್ತದೆ. ಈಗಾಗಲೇ ಹಿಂದಿನ ಅವಧಿಯಲ್ಲಿ ಕೈಗೊಂಡ ಯುಜಿಡಿ ಕಾಮಗಾರಿ ಸುಮಾರು 9 ಕಡೆಗಳಲ್ಲಿ ಹಾಗೆಯೇ ಬಿಡಲಾಗಿದೆ. ಇದರಿಂದ ಜನರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಆರೋಪಿಸಿದರು ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ, ಶಶೀಧರ ಬಸೇನಾಯ್ಕರ, ನೂರುಲ್ಲಾ ಖಾಜಿ, ಜಯಶ್ರೀ ಪಿಸೆ, ರಮೇಶ ಬಿಸಲಹಳ್ಳಿ, ಕಿರಣ ಗುಳೇದ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles