ಸದೃಡ ಸಮಾಜ ನಿರ್ಮಾಣದಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯ ಮಹತ್ತರವಾಗಿದೆ: ಶೋಭಾ ಗಂಜಿಗಟ್ಟಿ

  • 15 Jan 2024 , 4:46 AM
  • Haveri
  • 133

ಶಿಗ್ಗಾವಿ: ತಾಲೂಕಿನ ಚಾಕಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪೋಷಣಾ ಅಭಿಯಾನ, ಹೆಣ್ಣು ಮಕ್ಕಳ ಜನ್ಮದಿನ, ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯೆ ಶೋಭಾ ಗಂಜಿಗಟ್ಟಿ ಅಪೌಷ್ಟಿಕತೆ ಹೋಗಲಾಡಿಸಿ ಸದೃಡ ಸಮಾಜ ನಿರ್ಮಾಣ ಮಾಡುವಲ್ಲಿ ಸರ್ಕಾರದೊಂದಿಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕೇಂದ್ರಗಳು ಮಹತ್ತರವಾದ ಕಾರ್ಯ ಮಾಡುತ್ತಿವೆ, ಜನರಲ್ಲಿ ಪೌಷ್ಟಿಕತೆಯ ಅರಿವು ಮೂಡಿಸುತ್ತಿವೆ ಅವರಿಗೆ ಅಭಿನಂದನೆಗಳು ತಿಳಿಸಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗುವಂತೆ ಸಲಹೆ ನೀಡಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ನೀತಾ ವಾಡಕರ ಮಾತನಾಡಿ, ಅಪೌಷ್ಟಿಕತೆಯನ್ನು ಹೋಗಲಾಡಿಸುವದು. ಪೌಷ್ಟಿಕತೆಯ ಮೂಲಕ ಶಿಶು ಮತ್ತು ತಾಯಿಯ ಮರಣ ಕಡಿಮೆ ಮಾಡುವದು ಈ ಪೋಷಣ ಅಭಿಯಾನದ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ಹೋಗಿ ಅಪೌಷ್ಟಿಕ ಮಕ್ಕಳ ಸರ್ವೆ ಮಾಡಿ ಅವರನ್ನು ಪೌಷ್ಟಿಕತೆಯೊಂದಿಗೆ ಸದೃಡ ಮಾಡುವಲ್ಲಿ ನಮ್ಮ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಜವಳಗೇರಿ, ಪ್ರಾಥಮಿಕ ಶಾಲೆ ಶಿಕ್ಷಕ ಕಿರಣಕುಮಾರ, ಗ್ರಾಪಂ ಉಪಾಧ್ಯಕ್ಷೆ ಕಸ್ತೂರೆವ್ವಾ ಪಾಟೀಲ, ಸದಸ್ಯರಾದ ಮಲ್ಲವ್ವಾ ಹೈಬತ್ತಿ ಆಂಗನವಾಡಿ ಕಾರ್ಯಕರ್ತೆಯರಾದ ಸುನಂದಾ ಹಿರೇಮಠ, ನಾಗಮ್ಮ ಗಂಜಿಗಟ್ಟಿ, , ಅಕ್ಕಮಹಾದೇವಿ ಬನ್ನಿಕೊಪ್ಪ, ಲಲಿತಾ ಪಾಟೀಲ, ಬಾಲವಿಕಾಸ ಮಂಡಳಿ ಸದಸ್ಯರು, ಅಂಗನವಾಡಿ ಸಹಾಯಕರು, ಹೆಣ್ಣು ಮಕ್ಕಳು ಉಪಸ್ಥಿತರಿದ್ದರು. ಚನ್ನಮ್ಮ ಪಾಟೀಲ ಸ್ವಾಗತಿಸಿದರು. ಪಾರ್ವತಿ ಪಾಟೀಲ ಪ್ರಾರ್ಥಿಸಿದರು.

promotions

promotions

Read More Articles