ಎಸ್ಸಿ ಮೀಸಲಾತಿ ಮುಂದುವರೆಸುವಂತೆ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲಾರಿಗೆ ಮನವಿ
- 14 Jan 2024 , 9:53 PM
- Belagavi
- 118
ಯಮಕನಮರಡಿ: ಹುಕ್ಕೇರಿ ತಾಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಿಂಧಿಹಟ್ಟಿ ಗ್ರಾಮದ 2 ನೇ ವಾರ್ಡನಲ್ಲಿ ಬರುವ ಎಸ್ಸಿ ಮೀಸಲಾತಿಯನ್ನು ತೆಗೆದು ಸಾಮಾನ್ಯ ಅಭ್ಯರ್ಥಿ ಮೀಸಲಾತಿ ನಿಗದಿಪಡಿಸಿರುತ್ತಾರೆ.

ಆದ್ದರಿಂದ ಈ ಬದಲಾವಣೆಯಿಂದ ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇಂದು ಬುಧವಾರ ದಿ. 29 ರಂದು ಹುಕ್ಕೇರಿ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲಾರಿಗೆ ಮನವಿ ಸಲ್ಲಿಸಿದರು.

ಕಳೆದ ಮಂಡಳ ಪಂಚಾಯತಿ ಚುನಾವಣೆಯಲ್ಲಿ ಎಸ್ಸಿ ಮೀಸಲಾತಿ ಇದ್ದು, ಈಗ ಎಸ್ಸಿ ಮೀಸಲಾತಿಯನ್ನು ತೆಗೆದು ಹಾಕಿ ಸಾಮಾನ್ಯ ವರ್ಗಕ್ಕೆ ಬದಲಾವಣೆ ಮಾಡಲಾಗಿದೆ. ಈ ವಾರ್ಡನಲ್ಲಿ ಮಾದಿಗ ಸಮುದಾಯದ ಮತದಾರರೆ ಗರಿಷ್ಟ ಸಂಖ್ಯೆಯಲ್ಲಿ ಇರುವುರಿಂದ ಇನ್ನು ಮುಂದೆ ಪರಿಶಿಷ್ಟ ಜಾತಿಯ ಮೀಸಲಾತಿ ಹಕ್ಕನ್ನು 2020 ರ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಮುಂದುವರೆಯಿಸಬೇಕೆಂದು ಶಿಂಧಿಹಟ್ಟಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ವಿನಂತಿಸಿಕೊಂಡರು.
ಒಂದು ವೇಳೆ ಸನ್ 2020 ನೇ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಸದಸ್ಯತ್ವದ ಮೀಸಲಾತಿಯನ್ನು ಮುಂದುವರೆಯಿಸದೇ ಹೋದರೆ ಗ್ರಾಮ ಪಂತಾಯತ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತೀಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂಡೆಪ್ಪಾ ಮಾದರ, ಪ್ರಕಾಶ ಹೊಸಮನಿ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ಧ್ವನಿ) ಹುಕ್ಕೇರಿ ತಾಲೂಕಾ ಅಧ್ಯಕ್ಷ ಪರಶುರಾಮ ಮಾದರ, ಶ್ರೀಕಾಂತ ಹರಿಜನ, ಸುರೇಶ ಹರಿಜನ, ಶೆಟ್ಟೆಪ್ಪಾ ಹರಿಜನ, ಪ್ರವೀಣ ಶಿಂಧೆ, ಜಾಂಬವ ಯುವ ಸೇನೆಯ ಜಿಲ್ಲಾಧ್ಯಕ್ಷ ಶಶಿಕಾಂತ ಹೊನ್ನಳ್ಳಿ, ಯಲ್ಲಪ್ಪಾ ಸನದಿ, ಸಿದ್ದು ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.










