ಮಹಾಂತ ಸ್ವಾಮೀಜಿಯವರ 83 ನೇ ಜಯಂತ್ಯುತ್ಸವ ಕಾರ್ಯಕ್ರಮ
- 14 Jan 2024 , 10:46 PM
- Haveri
- 200
ಬಂಕಾಪುರ: ಮಹಾತ್ಮರ ಸಂದೇಶಗಳು ಮನುಕುಲದ ಮೌಲ್ಯಾಧಾರಿತ ಬದುಕಿಗೆ ದಾರಿ ದೀಪವಾಗಿವೆ. ಅವರು ಹಾಕಿಕೊಟ್ಟ ಸನ್ಮಾರ್ಗದ ದಾರಿಯಲ್ಲಿ ಮನುಜ ನಡೆದಾಗ ಮಾತ್ರ ಮಾನವನ ಜೀವನ ಪಾವನವಾಗಲಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡರಾದ ವೀರೇಶ ಆಜೂರ ಹೇಳಿದರು. ಸಮಿಪದ ಬಿಸನಳ್ಳಿ ಗ್ರಾಮದಲ್ಲಿ ನಡೆದ ಹರಿಹರದ ಪಂಚಮಸಾಲಿ ಪೀಠದ ಲಿಂಗೈಕ್ಯ ಮಹಾಂತ ಸ್ವಾಮೀಜಿ ಅವರ 83 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು, ಸರಳ ಬದುಕಿಗೆ ಆದ್ಯತೆ ನೀಡಿದ ಶ್ರೀಗಳು ತಮ್ಮ ಬದುಕಿನ ಅವಧಿಯಲ್ಲಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದವರಾಗಿದ್ದರು. ಮನುಕುಲದ ಉದ್ಧಾರಕ್ಕಾಗಿ ರಾಜ್ಯಾಧ್ಯಂತ ಸಂಚರಿಸಿ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರಾಗಿದ್ದರು ಎಂದು ಹೇಳಿದರು. ಪಂಚಮಸಾಲಿ ಮುಖಂಡ ಉಮೇಶ ಅಂಗಡಿ ಮಾತನಾಡಿ ಮಾತನಾಡಿ, ಸುಭದ್ರ ಸಮಾಜ ನಿರ್ಮಾಣಕ್ಕೆ ಲಿಂಗೈಕ್ಯ ಶ್ರೀ ಮಹಾಂತ ಸ್ವಾಮಿಜಿ ಯವರ ಕೊಡೆಗೆ ಅಪಾರವಾಗಿದೆ. ಮಕ್ಕಳಿಗೆ ಮಹಾತ್ಮರ ಸಂದೇಶ, ಜೀವನ ಕಥೆಗಳನ್ನು ತಿಳಿಸುವ ಮೂಲಕ ಸಂಸ್ಕಾರಗಳನ್ನು ನೀಡಬೇಕು ಅವರ ಆದರ್ಶಮಯ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಿನಡೆದಾಗ ಮಾನವ ಜನ್ಮ ಸಾರ್ಥಕವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯ ಶ್ರೀಕಾಂತ ಪೂಜಾರ, ಮುಖಂಡರಾದ ರೇಣುಕಗೌಡ ಪಾಟೀಲ, ಚನ್ನುಕುಮಾರ ದೇಸಾಯಿ, ಶಂಭು ಆಜೂರ, ಮುರಿಗೇಶ ಆಜೂರ, ಗಂಗಾಧರ ಸವಣೂರ, ಗುರು ಅಣ್ಣಿಗೇರಿ, ವೀರಭದ್ರಪ್ಪ ಹೊಸಮನಿ, ಬಸಲಿಂಗಪ್ಪ ನರಗುಂದ, ಸುರೇಶ ಹೋಸಮನಿ, ಸುರೇಶ ಎಲಿಗಾರ, ಸೋಮು ಆಜೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.












