ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ

ಬಂಕಾಪುರ : ಪೋಷಣ ಅಭಿಯಾನ ಕಾರ್ಯಕ್ರಮವನ್ನು ಕೇಂದ್ರ ಸರಕಾರ 2018 ರಲ್ಲಿ ಐದು ವರ್ಷದೊಳಗಿನ ಮಗುವಿನ ಸವಾಂಗೀಣ ಆರೋಗ್ಯ ಅಭಿವೃದ್ಧಿಗೆ ಜಾರಿಗೆ ತಂದಿದೆ. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಸರಕಾರ ಗರ್ಭಿಣಿ ಮಹಿಳೆಯರ ಆರೋಗ್ಯದಕಡೆ ಹೆಚ್ಚಿನ ಗಮನ ಹರಿಸಿ ಆರೋಗ್ಯವಂತ ಮಗುವಿನ ಜನನಕ್ಕೆ ಕಾರಣವಾಗಿದೆ ಎಂದು ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸುಜಾತಾ ಜವಳಗೇರಿ ಹೇಳಿದರು. ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕಾ ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ, ಪೋಷಣ ಅಭಿಯಾನ, ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿ, ತಾಯಿ ಗರ್ಭದಲ್ಲಿರುವಾಗಲೇ ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಅದರ ಬೆಳವಣಿಗೆಗೆ ತಕ್ಕ ಹಾಗೆ ಎತ್ತರ, ತೂಕದ ಬಗ್ಗೆ ಗಮನ ಹರಿಸಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇಲ್ಲದೇ ಇರುವುದಕ್ಕೆ ಅಂಗನವಾಡಿ ಶಿಕ್ಷಕಿ,ಸಹಾಯಕಿಯರ, ಆಶಾಕಾರ್ಯಕರ್ತರು, ಆರೋಗ್ಯ ಸಹಾಯಕಿಯರ ಕಾರ್ಯ ವೈಕರಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿ, ಗರ್ಭಾವಸ್ಥೆಯಲ್ಲಿ ಮಹಿಳೆ ಉತ್ತಮ ಪೌಷ್ಠಿಕ ಆಹಾರ ಸೇವನೆ ಮುಖ್ಯವಾಗಿದೆ. ತಾಯಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ತಾಯಿ ಮಗುವಿಗೆ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ ಅವಳ ಸೇವೆ ಸಮಾಜದಲ್ಲಿ ಅವಿಸ್ಮರಣೀಯವಾಗಿದೆ ಎಂದು ಹೇಳಿದರು. ಶುಶ್ರುಕಿಯರಾದ ಸಿದ್ದಾಪುರ ಮೇಡಂ ಮಾತನಾಡಿ, ಆರೋಗ್ಯವಂತ ದೇಹ ಸಿರಿ, ಸಂಪತ್ತನ್ನು ಪಡೆಯಲು ಮೊಳಕೆಕಾಳು, ಹಸಿ ತರಕಾರಿ, ಸೋಪ್ಪು, ಹಣ್ಣು, ಹಂಪಲುಗಳನ್ನು ಸೇವಿಸುವ ಅವಸ್ಯಕತೆಯಿದೆ. ಪೌಷ್ಠಿಕ ಆಹಾರ ಸೇವನೆ ನಾಡುವ ಗರ್ಭಿಣಿ ಮಹಿಳೆಯರು ಚೈತನ್ಯದಿಂದಕೂಡಿರುವುದರಿಂದ ಅಂತವರ ಹೆರಿಗೆಗಳು ಸುಲಬವಾಗಿ ಆಗಲಿವೆ ಎಂದು ಹೇಳಿದರು. ನೀರ್ಮಲಾ ಮುರಿಗೇಣ್ಣವರ ಮಾತನಾಡಿ, ಸಮಾಜಕ್ಕೆ ಆರೋಗ್ಯವಂತ ಮಗು ನೀಡುವ ಉದ್ದೇಶದಿಂದ ಸರಕಾರ ಮಾತೃಪೂರ್ಣ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃಒಂದನಾ, ಮಾತೋಶ್ರೀ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ಮಹಿಳೆಯರು ಪಡೆದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

promotions

ಕೋಟ್ : ಕುಟುಂಬ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆಯಲ್ಲಿ ತಾಯಿಯ ಪಾತ್ರ ಅಮೂಲ್ಯವಾಗಿದೆ. ಮಕ್ಕಳು ಪಾಲಕರ ಚಟುವಟಿಕೆಗಳನ್ನು ಅನುಕರಣೆ ಮಾಡುವುದರಿಂದ ಪಾಲಕರು ಕೂಡಾ ಒಳ್ಳೆಯ ಅಭ್ಯಾಸವನ್ನು ರೂಡಿಸಿಕೋಳ್ಳಬೇಕು. ಎಮ್.ವಿ.ಗಾಡದ ಹಿರಿಯ ಪತ್ರಕರ್ತ.

promotions

ಕಿಶೋರಿ ಹಾಗು ಗರ್ಭೀಣಿಯರಲ್ಲಾಗುವ ರಕ್ತಶ್ರಾವ ತಡೆಗಟ್ಟಲು ಮಹಿಳೆಯರು ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೋಳ್ಳಬೇಕು. ಗರ್ಭೀಣಿಯರು ಪೌಷ್ಠಿಕ ಆಹಾರ ಸೇವನೆ ಮಾಡುವಮೂಲಕ ಆರೋಗ್ಯವಂತ ಮಗುವನ್ನು ಸಮಾಜಕ್ಕೆ ನೀಡಬೇಕೇನ್ನುವುದೇ ಈ ಯೋಜನೆಯ ಮೂಲ ಉದ್ದೇಶವಾಗಿde.

ನಜ್ಮಾ ನದಾಫ್ ಫೋಷಣ ಅಭಿಯಾನ ತಾಲೂಕಾ ಸಂಯೋಜಕರು.

ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕವಾಗಿ ಹಸಿರುಬಳೆ, ಅಡಿಕೆ. ಎಲೆ, ಬಟ್ಟೆ, ಅರಿಷಣ, ಕುಂಕುಮ ಊಡಿ ತುಂಬಿ ಜಾತಿ ಬೇದ ಮರೆತು ಸೀಮಂತ ಕಾರ್ಯ ಮಾಡಲಾಯಿತು. ಬಗೆ, ಬಗೆಯ ಅಡುಗೆಗಳನ್ನು ತಯಾರಿಸಿ ಬವಿಕೆ ಊಟ ಊಣಬಡಿಸಿದರು. ಸತೀಷ ಮುದಕಣ್ಣವರ, ಶಾಂತವ್ವ ಹುರಳಿ, ರೇಣುಕಾ ರಾಣೋಜಿ, ಜಿ.ಯು.ದೊಡ್ಡಮನಿ, ಎಸ್.ಎನ್.ರಾಟಿ, ಆರ್.ಎಂ.ಬೇಂದ್ರೆ, ಜಿ.ಎಚ್.ಹಳವಳ್ಳಿ, ಶಿಲ್ಫಾ ಮುರಿಗೇಣ್ಣನವರ, ರತ್ನಾ ಪಾಟೀಲ, ಫರೀದಾ ಮುಲ್ಲಾ, ಮಂಜುಳಾ ಭಜಂತ್ರಿ, ಮಾಲಾ ಕುರಂದವಾಡ, ಜಿ.ಎಸ್.ಸಕ್ರಿ, ಪುಷ್ಫಾ ಹಿರೇಮಠ, ರೇಣುಕಾ ಕಟ್ಟಿಮನಿ, ಉಮಾಮಹೇಶ್ವರಿ, ಲಕ್ಷ್ಮೀ ಗುಳೇದ, ಗುಡಿಮನಿ ಸೇರಿದಂತೆ ಅಂಗನವಾಢಿ ಶಿಕ್ಷಕಿಯರು, ಆಶಾ ಕಾರ್ಯಕರ್ತರು ಶುಶ್ರುಕಿಯರು ಉಪಸ್ಥಿತರಿದ್ದರು.

Read More Articles