ಕರ್ನಾಟಕ ರಾಜ್ಯ ಕಂಡ ಅಪರೂಪದ ನಾಯಕ ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ರಾಜ್ಯ ಕಂಡ ಅಪರೂಪದ ನಾಯಕರುಗಳಲ್ಲಿ ಬಿ.ಎಸ್.ಯಡಿಯೂರಪ್ಪ ಒಬ್ಬರು. ಬ್ರ್ಯಾಂಡ್ ಬಗ್ಗೆ ಯಾವುದೇ ಕಲ್ಪನೆ, ಗಮನಗಳಿಲ್ಲದೇ ತಮ್ಮ ಹೋರಾಟದ ಮೂಲಕವೇ ಬ್ರ್ಯಾಂಡ್ ಆಗಿ ಹೊರಹೊಮ್ಮಿದವರು ಅಂತಾ ಯಾರಾದರೂ ಇದ್ದರೆ ಅದು ಬಿ.ಎಸ್.ಯಡಿಯೂರಪ್ಪ ಅಂದರೆ ಬಹುಶಃ ತಪ್ಪಾಗಲಾರದು.

promotions

ಈ ಹಿಂದೆ ಪಕ್ಕದ ರಾಜ್ಯದ ಜಯಲಲಿತಾ ಆರೋಪಗಳ ಮಾಲೆಯನ್ನೇ ಹೊದ್ದಿದ್ದರೂ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ರಾರಾಜಿಸುತ್ತಿದ್ದರು. ಆದರೆ ಯಡಿಯೂರಪ್ಪ ಎಂಬ ನಾಯಕನ ವಿಷಯದಲ್ಲಿ ಮಾತ್ರ ಹಾಗಾಗಲಾರದ್ದು ವಿಪರ್ಯಾಸದ ಸಂಗತಿ. ಒಂದು ಕಾಲದಲ್ಲಿ ರಾಜಕೀಯದಲ್ಲಿ ರಾಜನಾಗಿ ಮೆರೆದವರು ಈಗ ಏನೂ ಅಲ್ಲದವರು ರಾಜಕೀಯದಲ್ಲಿ ಬಹಳಷ್ಟು ಮಂದಿಯಿದ್ದಾರೆ. ಈ ಪರಿಸ್ಥಿತಿಗೆ ರಾಜಕಾರಣದಲ್ಲಿ ಉತ್ತಮ ಉದಾಹರಣೆಯೆಂದರೆ ಅದು ಬಿ.ಎಸ್.ಯಡಿಯೂರಪ್ಪ.

promotions

ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಹಠ, ಛಲಕ್ಕೆ ಬಿದ್ದರೆ ಮುಗಿದುಹೋಯಿತು ವಿರೋಧಿಗಳ ಜನ್ಮ ಜಾಲಾಡದೇ ಬಿಡೋರಲ್ಲ. ಜಾತಿ ಮಾತ್ರವಲ್ಲ, ಪಕ್ಷ ಮಟ್ಟದಲ್ಲೂ ಅವರದ್ದು ಎತ್ತರದ ನಾಯಕತ್ವ. ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಛಲಗಾರ, ಕಾವೇರಿ ವಿಚಾರ ಬಂದಾಗ ತನ್ನ ಪಕ್ಷಕ್ಕೆ ಸೀಟ್ ಬರುತ್ತೋ ಇಲ್ಲವೋ ಎಂಬುದನ್ನೂ ಲೆಕ್ಕಿಸದೇ ತಲಕಾವೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಹುಟ್ಟು ಹೋರಾಟಗಾರ, ತನ್ನ ಹರಿತವಾದ ಮಾತುಗಳಿಂದ ಆಡಳಿತ ಪಕ್ಷಗಳನ್ನು ತಿವಿದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೊಸ ಭಾಷ್ಯ ಬರೆದ ವಾಗ್ಮಿ, ಒಳ್ಳೆಯ ಸಂಸದೀಯ ಪಟು. ಕರ್ನಾಟಕದಲ್ಲಿ ಬಿಜೆಪಿ ಏನೂ ಇಲ್ಲದಿದ್ದಾಗ ಪಕ್ಷವನ್ನು ಅಧಿಕಾರಕ್ಕೇರುವಂತೆ ಮಾಡಿದವರು ಅಂದರೆ ಅದು ಯಡಿಯೂರಪ್ಪ.

ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಕಟ್ಟಿ ಪುನಃ ಮಾತೃ ಪಕ್ಷದ ಮಡಿಲಿಗೆ ವಾಪಸಾಗಿದ್ದು ಈಗ ಇತಿಹಾಸ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದ ಪ್ರಾದೇಶಿಕ ಪಕ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಮತ ಪ್ರಮಾಣ ಗಳಿಸಿದ ಯಶಸ್ಸು ಕೆಜೆಪಿ ಹಾಗೂ ಯಡಿಯೂರಪ್ಪನವರ ವರ್ಚಸ್ಸಿಗೆ ಹಿಡಿದ ಕೈಗನ್ನಡಿ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಗುಂಪುಗಾರಿಕೆ, ಅಧಿಕಾರದಿಂದ ಕೆಳಗಿಳಿದ ಮೇಲೆ ಜೈಲುವಾಸ, ರಾಜ್ಯದಲ್ಲಿ ರಾಜಕೀಯ ಅರಾಜಕತೆಗೆ ಕಾರಣವಾಗಿದ್ದು ಇಂತಹ ಹಲವು ಗುರುತರ ಆಪಾದನೆಗಳಿದ್ದರೂ ಜನ ಕೆಜೆಪಿ ಕಡೆ ತಕ್ಕಮಟ್ಟಿಗೆ ಆಕರ್ಷಿತರಾಗಿದ್ದಂತೂ ಸತ್ಯ.

ಇದಕ್ಕೆ ಕಾರಣವಾಗಿದ್ದು ಯಡಿಯೂರಪ್ಪನವರ ಹೋರಾಟದ ಮನೋಭಾವನೆ, ಲಿಂಗಾಯತ ಸಮೂಹದ ಬೆಂಬಲ, ಜನಪರ ಕಾರ್ಯಕ್ರಮಗಳು, ಇದೇ ಕಾರಣದಿಂದ ಯಡಿಯೂರಪ್ಪನವರ ಹೆಸರು ಸದಾ ಚಾಲ್ತಿಯಲ್ಲಿರುವುದು.

ರಾಜ್ಯದಲ್ಲಿ ಈ ಹಿಂದಷ್ಟೇ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಅವರಲ್ಲೇ ಆಂತರಿಕ ಜಗಳಗಳಿಂದಾಗಿ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದು ನಿರಂತರ ಹೋರಾಡಿ ಯಡಿಯೂರಪ್ಪ ಫೀನಿಕ್ಸ್ ನಂತೆ ಮೇಲೆದ್ದು ಬಂದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಉಪ ಚುನಾವಣೆಗಳಲ್ಲಿ ಬಿಜೆಪಿ ಬಾವುಟ ಹಾರಿಸಿ ಹಿಡಿದವರು ಪಟ್ಟು ಬಿಡದೆ ಮುಖ್ಯಮಂತ್ರಿ ಹುದ್ದೆ ಏರಿದ ಅಂದು ಕೊಂಡಿದ್ದನ್ನು ಸಾಧಿಸಿದ ಛಲಗಾರ ಪ್ರಬಲ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ.

ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ನಂತರ ದೊಡ್ದ ಮಟ್ಟದ ಛಾತಿಯನ್ನು ಪಡೆದ ಏಕೈಕ ನಾಯಕ ಅಂತಾ ಯಾರಾದರೂ ಇದ್ದರೆ ಅದು ಬಿಎಸ್ವೈ.

ಹಲವಾರು ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿ ಜನರ ಮನದಲ್ಲಿ ಹಚ್ಚ ಹಸಿರಾಗಿ ದಕ್ಷಿಣ ಭಾರತದ ಮೋದಿ ಎಂದು ಕರೆಯಲ್ಪಡುವ ನಾಯಕ ಅಂತಾ ಹೇಳಿದರೆ ಅದು ಬಿ.ಎಸ್.ಯಡಿಯೂರಪ್ಪ

ಮಲ್ಲಿಕಾರ್ಜುನ ಬಿ. ಕೆ. ಬೆಳಗಾವಿ

Read More Articles