ಕೋರೊನಾ ಸಂಕಷ್ಟದ ಮದ್ಯೆ ಮತ್ತೆ ಪ್ರವಾಹದ ಭೀತಿ

ಬೆಳಗಾವಿ: ಮುಂಗಾರು ಮಳೆ ಪ್ರವೇಶಕ್ಕೂ ಮೊದಲೇ ರಾಜ್ಯದಲ್ಲಿ ಮಳೆಯ ಆರಂಭವಾಗಿದೆ ಹಲವು ಕಡೆ ಬಾರಿ ಮಳೆ ಬೀಳುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಬೀಸುತ್ತಿರುವ ನಿಸರ್ಗ ಚಂಡಮಾರುತದ ಪರಿಣಾಮ ಈ ಗಡಿಜಿಲ್ಲೆಗೂ ಅದರ ಪರಿಣಾಮ ಬೀರಿದೆ ಮೊದಲೇ ಕೋರೊನಾ ಸಂಕಷ್ಟದಲ್ಲಿದ್ದ ಜನರಿಗೆ ಈಗ ಮತ್ತೆ ಸದ್ದು ಮಾಡುತ್ತಿರುವ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಗಾಯದ ಮೇಲೆ ಬರೆ ಎಳೆದರು ಎನ್ನುವಂತೆ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ನದಿ ತೀರದ ಜನತೆಯನ್ನು ಕಂಗಾಲಾಗಿಸಿದೆ ಜೊತೆಗೆ ಪ್ರವಾಹ ಭೀತಿ ಕಾಣಿಸಿಕೊಂಡಿದ್ದು. ನದಿ ತೀರದ ಜನತೆ ಮತ್ತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾಗಿ ಬಂದಿರುವುದರಿಂದ ಏನಪ್ಪ ಇದು ಬರೆ ಹಿಂಗ ಆದ್ರ ಮುಂದ ನಮ್ಮ ಗತಿ ಏನು ? ಎಂಬ ಪ್ರಶ್ನೆ ಇಲ್ಲಿನ ಜನರಲ್ಲಿ ಉದ್ಬವ ಆಗಿದೆ. ಈ ಹಿಂದೆ ಉಂಟಾಗಿದ್ದ ಪ್ರವಾಹದಿಂದ ತತ್ತರಿಸಿ ಹೋಗಿರುವ ಜನತೆಗೆ ಇನ್ನು ವ್ಯವಸ್ಥಿತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ಇದರ ನಡುವೆ ಮತ್ತೆ ಈ ಮಳೆಯಿಂದ ಪ್ರವಾಹದ ಭೀತಿ ಎದುರಾಗಿದ್ದು ಜನರನ್ನು ಭಾರಿ ಸಂಕಷ್ಟಕ್ಕೆ ಇಡು ಮಾಡಿದೆ. ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗಾವಿ ನಗರ ಸೇರಿದಂತೆ ಖಾನಾಪುರ, ಕಿತ್ತೂರ್, ಬೈಲಹೊಂಗಲ, ಹುಕ್ಕೇರಿ, ಚಿಕ್ಕೋಡಿ ತಾಲೂಕ ಸೇರಿದಂತೆ ಇತರೆಡೆಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು. ಈಗಷ್ಟೇ ಮತ್ತೆ ಬದುಕು ರೂಪಿಸಿಕೊಳ್ಳುತ್ತಿದ್ದ ಜನರಿಗೆ ಮಳೆ ನೀರಿನಲ್ಲಿ ಜನರು ಕಣ್ಣೀರು ಸುರಿಸುತ್ತಿದ್ದಾರೆ. ಕೋರೊನಾ ಸಂಕಷ್ಟದಲ್ಲಿ ಈಗಾಗಲೆ ಈ ಗಡಿನಾಡಿನ ಜನರು ಸಿಲುಕಿದ್ದಾರೆ. ಮೊದಲೇ ಈ ಜಿಲ್ಲೆಗೆ ಸಮೀಪವಿರುವ ಮಹಾರಾಷ್ಟ್ರದ ಕೊರೊನಾದ ನಂಜು ಬೆಳಗಾವಿಗೂ ತಾಗಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ ಒಂದು ಕಡೆ ಕೋರೊನಾ ಉಪಟಳ ಮತ್ತೊಂದೆಡೆ ಈ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ನಿಸರ್ಗ ಚಂಡ ಮಾರುತದ ಪರಿಣಾಮ ಬೆಳಗಾವಿ ಮೇಲೆ ಮಹಾ ದ ಕರಿ ನೆರಳಿನ ಛಾಯೆ ಕುಂದಾನಗರಿ ಮೇಲೆ ಬಿದಿದ್ದಂತರು ಸತ್ಯ.

promotions

Read More Articles