ಕೊವಿಡ್ 19 ಹಿನ್ನಲೆ ಸರಳ ಪದ್ಧತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆ
- 15 Jan 2024 , 4:44 AM
- Haveri
- 103
ಬಂಕಾಪುರ: ಪಟ್ಟಣದ ಅಂಬೇಡ್ಕರ ನಗರದಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹುದ್ಧೂರ ಶಾಸ್ತಿçಯವರ ಜಯಂತಿಯನ್ನು ಕೋವಿಡ್ ಇರುವ ಹಿನ್ನಲೆಯಲ್ಲಿ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸುವ ಮುಖಾಂತರ ಅತೀ ಸರಳವಾಗಿ ಆಚರಿಸಲಾಯಿತು. ದ್ವಜಾರೋಹಣ ನೆರೆವೇರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಹಾತ್ಮ ಗಾಂಧೀಜಿಯವರು ಅಸಹಕಾರ ಅಂಧೋಲನ, ಉಪ್ಪಿನ ಸತ್ಯಾಗ್ರಹದ ಮೂಲಕ ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸತ್ಯ, ಶಾಂತಿ, ಅಹಿಂಸಾ ಮಾರ್ಗದಿಂದ ಹೋರಾಡಿ ನಮಗೆ ಸ್ವಾತಂತ್ರ ಕೊಡಿಸುವಲ್ಲಿ ಮುಂಚೋಣಿಯ ನಾಯಕರಾಗಿದ್ದಾರೆ.

ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೋಳ್ಳುತ್ತಿದ್ದು ಸಾವಿನ ಸಂಖ್ಯೆ ಕೂಡಾ ಹೆಚ್ಚಾಗುತ್ತಲಿದೆ. ಆದ್ದರಿಂದ ಸಾರ್ವಜನಿಕರು ಮನೆಯ ಸುತ್ತ ಮುತ್ತಲಿನ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಜನರಲ್ಲಿ ಮನವಿ ಮಾಡುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ ಧರಿಸಿ ಅಂತರ ಕಾಯ್ದುಕೋಳ್ಳುವ ಮೂಲಕ ಕೊರೋನಾ ಹರಡದಂತೆ ಮುನ್ನೇಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ಹ್ಯಾಂಡ್ ಗ್ಲೌಜ್ ಧರಿಸಿ ಅಂಬೇಡ್ಕರ ನಗರವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ನೈರ್ಮಲ್ಯ ಅಧಿಕಾರಿ ರೂಪಾ ನಾಯ್ಕರ, ಕಛೇರಿ ವ್ಯವಸ್ಥಾಪಕಿ ಬಸಮ್ಮ ಕೊರಕಲ್, ಪರಶುರಾಮ ಹೆಬ್ಬಾರ, ನಿಂಗಪ್ಪ ಹೊಸಮನಿ, ಎಸ್.ಪಿ.ದೊಡ್ಡಮನಿ, ಆರ್.ಡಿ.ತಿರಕಪ್ಪನವರ, ಮಂಜುನಾಥ ಪುಟ್ಟಣ್ಣವರ, ಅಶ್ವಿನಿ ಸುಣಗಾರ, ನೀರ್ಮಲಾ ಗುಡಿಮನಿ, ಹೊನ್ನಮ್ಮ ಕೊಳಲ, ಮಾಲಾ ಕಲಾಲ, ಜಗದೀಶ ದೊಡ್ಡಗೌಡ್ರ, ಸಂಶಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.











