ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸಬೇಕಾಗಿದ್ದ ಮಹಾತ್ಮರ ಜಯಂತಿಯನ್ನು ಕೇವಲ ಶಿಕ್ಷಕರೊಂದಿಗೆ ಆಚರಿಸುವಂತಾಗಿದೆ; ಶಿಕ್ಷಕಿ ಜಿ.ಎಸ್.ದೇಸಾಯಿ

  • 15 Jan 2024 , 3:37 AM
  • Haveri
  • 198

ಬಂಕಾಪುರ: ಪಟ್ಟಣದ ಲಯನ್ಸ್ ನವಭಾರತ ವಿದ್ಯಾಸಂಸ್ಥೆಯ ವತಿಯಿಂದ ಇಂದು 151 ನೇ ಗಾಂಧಿ ಜಯಂತಿ ಹಾಗೂ 115 ನೇ ಲಾಲಬಹದ್ದೂರ ಶಾಸ್ತಿçಯವರ ಜಯಂತಿಯನ್ನು ಭಾವಚಿತ್ರಕ್ಕೆ ಶಾಲಾ ಮುಖ್ಯ ಶಿಕ್ಷಕಿ ಜಿ.ಎಸ್.ದೇಸಾಯಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಬ್ರಿಟೀಷರ ಸಂಕೋಲೆಯಲ್ಲಿದ್ದ ಭಾರತವನ್ನು ಮಹಾತ್ಮ ಗಾಂಧಿಜಿಯವರು ಶಾಂತಿ ಮತ್ತು ಅಹಿಂಸೆಯ ಮಂತ್ರ ಜಪಿಸುವ ಮೂಲಕ ಮುಕ್ತಗೊಳಿಸಿ ನಮಗೆ ಸ್ವಾತಂತ್ರö್ಯ ತಂದು ಕೊಟ್ಟರು. ಕ್ರಾಂತಿಯಿAದ ಪಡೆಯಬೇಕಾದ ಸ್ವಾತಂತ್ರö್ಯವನ್ನು ಶಾಂತಿಯಿAದ ಪಡೆಯುವಲ್ಲಿ ಗಾಂಧೀಜಿಯವರ ಆದರ್ಶಮಯ ಗುಣಗಳನ್ನು ಪ್ರತಿಯೋಬ್ಬರು ಅಳವಡಿಸಿಕೊಂಡಾಗ ಮಾತ್ರ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಸಾಧ್ಯ ಎಂದರು. ಗಾಂಧೀಜಿ ಹಾಗೂ ಶಾಸ್ತಿçÃಜಿಯವರ ಜಯಂತಿಯನ್ನು ಶಾಲಾ ಮಕ್ಕಳೊಂದಿಗೆ ಆಚರಿಸಬೇಕಾಗಿರುವುದನ್ನು ಈ ಬಾರಿ ಕೊರೊನಾ ಮಹಾಮಾರಿ ಅರ್ಭಟದಿಂದಾಗಿ ಅತೀ ಸರಳವಾಗಿ ಕೇವಲ ಶಾಲಾ ಶಿಕ್ಷಕರೋಂದಿಗೆ ಆಚರಿಸುವಂತಾಗಿದೆ. ಇಂತಹ ದುಸ್ಥಿತಿ ಒದಗಿಬಂದಿರುವುದು ಮನಸ್ಸಿಗೆ ನೋವುಂಟಾದರೂ ಇದು ಅನಿವರ‍್ಯವಾಗಿದೆ. ಈ ಮಹಾಮಾರಿ ಆದಷ್ಟು ಬೇಗ ತೋಲಗಿ ಮಕ್ಕಳೊಂದಿಗೆ ಶಿಕ್ಷಕರು ಬೆರೆಯೂವ ಕಾಲ ಬೇಗ ಬರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ತಾರಾ ಶಿಗ್ಗಾವಿ, ಸುರೇಶ ಮುರಿಗೇಣ್ಣವರ, ಮಾನಸಾ ಕಮ್ಮಾರ, ಜ್ಯೋತಿ ಕಟಗಿಮಠ, ಎಚ್.ಎನ್.ಹಳೆಮನಿ, ವಾಲಿಶೆಟ್ಟರ ಸೇರಿದಂತೆ ಇತ್ತಿತರರು ಉಪಸ್ಥಿತರಿದ್ದರು.

promotions

promotions

Read More Articles