ಸಿಬಿಐ ದಾಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಇಂದು ಮುಂಜಾನೆ ದಿಡೀರನೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಂದೆ ಕೂಡ ಇಡೀ ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

promotions

ಇದರ ಬೆನ್ನಲ್ಲೇ ಇದೀಗ ಸಿಬಿಐ ಅಧಿಕಾರಿಗಳು ಡಿಕೆಶಿ ಹಾಗೂ ಅವರ ಸಹೋದರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರರು ಹಾಗೂ ಶಾಸಕಿಯೂ ಆದ ಹೆಬ್ಬಾಳ್ಕರ್ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ದಾಳಿಗಳು ಸಹಜ, ಹಿಂದೆ ಕೂಡ ಇಡೀ ಮತ್ತು ಐಟಿ ಇಲಾಖೆಗಳು ದಾಳಿ ನಡೆಸಿದ್ದರು ಇವಾಗ ಸಿಬಿಐ ದಾಳಿ ನಡೆದಿದೆ.

promotions

ರಾಜಕೀಯ ದುರುದ್ದೇಶದಿಂದ ದಾಳಿಗಳು ನಡೆಯುತ್ತಿವೆ. ಈಗಾಗಲೇ ನಾವೆಲ್ಲ ಉಪಚುನಾವಣೆಗೆ ಸಿದ್ಧರಾಗುತ್ತಿದ್ದೆವು, ಈ ಸಂಧರ್ಭದಲ್ಲಿ ನಮಗೆ ತೊಂದರೆ ಕೊಡುವ ಉದ್ದೇಶದಿಂದಲೇ ದಾಳಿ ನಡೆದಿದೆ, ನಮ್ಮ ನಾಯಕರು ಸಮರ್ಥರಾಗಿದ್ದಾರೆ. ಇದೆಲ್ಲವನ್ನು ಸಮರ್ಥಕವಾಗಿ ಎದುರಿಸುತ್ತಾರೆ ಎಂದರು.

ಈ ದಾಳಿ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನುವ ಮಾಹಿತಿ ಇಲ್ಲ, ಇದೆಲ್ಲವನ್ನು ನಮ್ಮ ನಾಯಕರು ಸಮರ್ಥರಾಗಿ ಎದುರಿಸುತ್ತಾರೆ ಎಂದು ಹೇಳಿದರು.

Read More Articles