ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರ ಆದೇಶದ ಮೇರೆಗೆ ಜ್ಯೋತಿಷ್ಯ ತರಬೇತಿ ಶಿಬಿರಕ್ಕೆ ಚಾಲನೆ
- 6 Jan 2024 , 12:29 AM
- Haveri
- 165
ಬಂಕಾಪುರ: ದಕ್ಷಿಣ ಕಾಶಿ ಎಂದೇ ಖ್ಯಾತನಾಮ ಪಡೆದ ಬಿಸನಳ್ಳಿ ವೇದ ಪಾಠ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸುವ ಮೂಲಕ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಇಲ್ಲಿ ಜ್ಞಾನಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಶಿಕ್ಷಣವನ್ನೂ ಕೂಡಾ ಉಚಿತವಾಗಿ ನೀಡುತ್ತಿರುವ ಕೀರ್ತಿ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರಿಗೆ ಸಲ್ಲುತ್ತದೆ ಎಂದು ವಿದ್ವಾನ ಜ್ಯೋತಿಷ್ಯ ಪಂಡಿತರಾದ ಗಣೇಶ ಹೆಗಡೆ ಹೇಳಿದರು.

ಪಟ್ಟಣದ ಸಮೀಪದ ಬಿಸನಳ್ಳಿ ಗ್ರಾಮದ ಜ.ಪಂ.ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಪಾಠಶಾಲೆಯಲ್ಲಿ ಇಂದು ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರ ಆದೇಶದ ಮೇರೆಗೆ ಅಕ್ಟೋಬರ 5 ರಿಂದ 14 ರ ವರೆಗೆ ಜ್ಯೋತಿಷ್ಯ ತರಬೇತಿ ಶಿಬಿರನ್ನು ಹಮ್ಮಿಕೊಳ್ಳಲಾಗಿದ್ದು, ಹುಬ್ಬಳ್ಳಿಯ ವಿದ್ವಾನ ಜ್ಯೋತಿಷ್ಯ ಪಂಡಿತರಾದ ಗಣೇಶ ಹೆಗಡೆಯವರಿಂದ ನಡೆಯಲಿರುವ ಜ್ಯೋತಿಷ್ಯ ತರಬೇತಿ ಶಿಬಿರನ್ನು ವರದಶಂಕರ ಮಹಾಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಪಾಠಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಶಾಸ್ತ್ರಿ ಮಾತನಾಡಿ, ಕೊರೊನಾ ಮಹಾಮಾರಿ ದಿನದಿಂದ, ದಿನಕ್ಕೆ ಉಲ್ಭಣಗೋಳ್ಳುತ್ತಿದ್ದು, ಪಾಠಶಾಲೆಯ ತರಗತಿಗಳು ನಡೆಯದಂತಾಗಿವೆ. ಆದಕಾರಣ ಜ್ಯೋತಿಷ್ಯ ತರಬೇತಿಗಾಗಿ ಕೆಲವೊಂದಿಷ್ಟು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಕೋವಿಡ್-19 ನಿಯಮದ ಪ್ರಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಾಠಶಾಲೆಯ ಉಪಾಧ್ಯಕ್ಷ ಶಂಬಣ್ಣ ಮಾ.ಪ.ಶೆಟ್ಟರ, ಗದಿಗಯ್ಯ ಹಿರೇಮಠ, ಗುರುಶಾಂತಪ್ಪ ನರೇಗಲ್, ಕುಮಾರಸ್ವಾಮಿ ಹಿರೇಮಠ, ಗಂಗಾಧರ ಬಡ್ಡಿ, ಗದಿಗೇಪ್ಪ ಮಾ.ಪ.ಶೆಟ್ಟರ, ಪರಶುರಾಮ ಕುದರಿ, ಮುರಗೇಶ ಆಜೂರ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.










