ತೊಂದರೆ ಸಮಯದಲ್ಲಿ112 ತುರ್ತು ಸ್ಪಂದನ ಸಂಖ್ಯೆಗೆ ಕರೆ : ಡಿ.ವಾಯ್.ಎಸ್ಪಿ ವಿಜಯ ಕುಮಾರ ಮಾಹಿತಿ
- 23 Dec 2023 , 6:31 PM
- Haveri
- 120
ಬ್ಯಾಡಗಿ: ಸಾರ್ವಜನಿಕರು ಬೇರೆಯವರಿಂದ ತೊಂದರೆ, ಬೆಂಕಿ, ಆಕಸ್ಮಿಕ ದುರ್ಘಟನೆಗಳು, ಪಾಕೃತಿಕ ಸಮಸ್ಯೆಯಿಂದ ಜೀವಹಾನಿ ಹತ್ತು ಹಲವು ತೊಂದರೆಯಲ್ಲಿ ಸಿಲುಕಿದಾಗ ಈ 112 ತುರ್ತು ಸ್ಪಂದನ ಸಂಖ್ಯೆಗೆ ಕರೆಮಾಡಿದಲ್ಲಿ 15 ನಿಮಿಷದಲ್ಲಿ ನಿಮಗೆ ನೆರವು ಸಿಗಲಿದೆ ಎಂದು ಡಿವಾಯ್‍ಎಸ್ಪಿ ವಿಜಯ ಕುಮಾರ ಎನ್, ಸಂತೋಷ ಸಾರ್ವಜನಿಕರಿಗೆ ತಿಳಿಸಿದರು. ಪಟ್ಟಣದ ಪೋಲಿಸ ಠಾಣೆಯಿಂದ ವತಿಯಿಂದ ಸುಭಾಸ ವೃತ್ತ, ಹಳೆಪುರಸಭೆ, ಬಸ್ಸ ನಿಲ್ದಾಣ ಸೇರಿದಂತೆ ವಿವಿಧ ಪೋಲಿಸರ ತಂಡ ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮದ ಬಳಿಕ ಕರಪತ್ರ ನೀಡಿ ಮಾತನಾಡಿದರು. ಸಾರ್ವಜನಿಕರ ಆಕಸ್ಮಿಕ ಘಟನೆಗಳಿಗೆ ಸಹಾಯ ಮಾಡಲು 112 ತುರ್ತು ಸ್ಪಂದನ ಸಹಾಯವಾಣಿ ವ್ಯವಸ್ಥೆ ಜಾರಿಗೆ ಬಂದಿದೆ. ಇದಕ್ಕಾಗಿ ಕೆಎಸ್‍ಪಿ ಮೋಬೈಲ್ ಆಪ್ ಕೂಡ ಇಲಾಖೆ ಸಿದ್ದಪಡಿಸಿದೆ. ಧ್ವನಿ ಸುರುಳಿ ಕೂಡ ಇದರಲ್ಲಿ ಲಭ್ಯವಿದೆ. ಇದರಿಂದ ಹತ್ತಿರದ ಪೋಲಿಸ ಠಾಣೆಗಳ ಮಾಹಿತಿ, ಸಂಬಂಧಪಟ್ಟವರಿಗೆ ಸಂದೇಶ ರವಾನೆ, ಕಳುವಾದ ವಾಹನಗಳ ಶೋಧ ಇತರೆ ಅನುಕೂಲಗಳಿವೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಹಾವೇರಿ, ಡಾವಣಗೇರಿ, ಬಾಗಲಕೋಟಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗಿದೆ ಎಂದರು. ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಎಂಬ ಧ್ಯೇಯವನ್ನು ಹೊತ್ತಿರುವ ಈ ಯೋಜನೆ ದೇಶದ ಪ್ರತಿಯೊಂದು ಸ್ಥಳಗಳಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ. ಈ ಕುರಿತು ಅಟೋ ಹಾಗೂ ವಿವಿಧ ವಾಹನಗಳು, ಚಾಲಕರು, ಸಂಘ, ಸಂಸ್ಥೆ ಹಾಗೂ ಮಹಿಳಾ ಸಂಘಗಳ ಸದಸ್ಯರಿಗೆ ತಿಳಿವಳಿಕೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿಪಿಐ ಬಸವರಾಜ ಪಿ.ಎಸ್, ಪಿಎಸ್‍ಐ ಮಹಾಂತೇಶ ಎಂ.ಎಂ, ಸಿಬ್ಬಂದಿಗಳಾದ ಕೆ.ಎಂ.ಗಡಿಯಪ್ಪಗೌಡ್ರ, ಪ್ರಭಯ್ಯ ಹಿರೇಮಠ, ಹನುಮಂತಪ್ಪ ಸುಂಕದ, ಮಾಲತೇಶ ಈರಣ್ಣನವರ, ಲೋಕೇಶ ಲಮಾಣಿ, ಮೃತ್ಯುಂಜಯ ಎಚ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.












